Sunday, December 22, 2024

ಈಗಲೂ ಕಾಲ ಮಿಂಚಿಲ್ಲ, ಪ್ಲೀಸ್ ನಾಳೆ ರಜೆ ಕೊಡಿ : ಸಿಎಂಗೆ ವಿಜಯೇಂದ್ರ ಮನವಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಈಗಲೂ ಕಾಲ ಮಿಂಚಿಲ್ಲ. ನಾಳೆ ರಜೆ ಘೋಷಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಿಮ್ಮ ಸರ್ಕಾರದ ರಾಮ ವಿರೋಧಿ ಮನಸ್ಸುಗಳ ವರ್ತನೆ ಹಾಗೂ ನಿಂದನೆಗಳ ಪರಿಣಾಮ ಈಗಾಗಲೇ ಕಳಂಕದ ಭಾರ ನಿಮ್ಮ ಹೆಗಲೇರಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ರಾಮಶ್ರದ್ಧೆಯ ಹೃದಯಗಳ ನಿರೀಕ್ಷೆಗೆ ಅಲ್ಲಿನ ಮುಖ್ಯಮಂತ್ರಿಗಳು ತಮ್ಮ ವಿವೇಚನೆಯ ಬಾಗಿಲು ತೆರೆದು ಸಾರ್ವತ್ರಿಕ ರಜೆ ಘೋಷಿಸಿ ರಾಷ್ಟ್ರೀಯತೆ ಗೌರವಿಸಿದ್ದಾರೆ. ನೀವು ರಜೆ ಘೋಷಿಸಿ ಎಂದು ಹೇಳಿದ್ದಾರೆ.

ನಿಮ್ಮ ಊರಿನಿಂದಲೇ ರಾಮ ಅಯೋಧ್ಯೆಗೆ ತೆರಳಿದ್ದಾನೆ

ಈಗಲೂ ಕಾಲ ಮಿಂಚಿಲ್ಲ. ನಿಮ್ಮ ಮೈಸೂರಿನಿಂದಲೇ ಬಾಲ ರಾಮ ಅಯೋಧ್ಯೆಗೆ ತೆರಳಿದ್ದಾನೆ. ಶತಕೋಟಿ ಜನರ ಹೃದಯಗಳ ನಾಳೆ ಆವರಿಸಿಕೊಳ್ಳಲಿದ್ದಾನೆ, ಈ ಪವಿತ್ರ ಕ್ಷಣಗಳನ್ನು ಕಣ್ತುಂಬಿಕೊಂಡು ದಿನವಿಡೀ ರಾಮ ಸ್ಮರಣೆ ಮಾಡಲು ಹಂಬಲಿಸುತ್ತಿರುವ ಜನರ ಭಾವನೆಗಳನ್ನು ಗೌರವಿಸಲು ನಾಳೆ ರಜೆ ಘೋಷಿಸಿ ಬಿಡಿ, ಅಪವಾದದಿಂದ ದೂರವಿರಿ ಎಂದು ವಿಜಯೇಂದ್ರ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES