Thursday, January 23, 2025

ಬಾಲ ರಾಮ ಪ್ರಾಣಪ್ರತಿಷ್ಠೆಗೆ ಕೌಂಟ್‌ಡೌನ್ : ಬೆಂಗ್ಳೂರಿನಿಂದ ಅಯೋಧ್ಯೆಗೆ ಹೆಚ್ಚುವರಿ ರೈಲು ಸೇವೆ

ಬೆಂಗಳೂರು: ಬಾಲ ರಾಮ ಪ್ರಾಣಪ್ರತಿಷ್ಠೆಗೆ ಕೌಂಟ್‌ಡೌನ್ ಶುರುವಾಗಿದೆ. ಬೆಂಗಳೂರಿನ ಜನರೂ ಸಹ ಶ್ರೀರಾಮ ದರ್ಶನಕ್ಕೆ ಹೋಗಲು ಸಿದ್ದರಾಗಿದ್ದಾರೆ. ಆದ್ದರಿಂದ ಅಯೋಧ್ಯೆಗೆ ಹೆಚ್ಚುವರಿ ರೈಲು ಸೇವೆ ಕಲ್ಪಿಸಲು ಇಲಾಖೆ ಮುಂದಾಗಿದೆ.

ಹೌದು, ಈಗಲೇ ಅಯೋಧ್ಯೆಗೆ ರೈಲಿನ ಮೂಲಕ ತೆರಳುವವರು ಈಗಾಗಲೇ ಟಿಕೆಟ್ ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನೈರುತ್ಯ ವಲಯದ ರೈಲ್ವೆ ಹೆಚ್ಚುವರಿ ರೈಲು ಸೇವೆ ಕಲ್ಪಿಸಲು ಚಿಂತನೆ ನಡೆಸಿದ್ದಾರೆ.

1) ಯಶವಂತಪುರ – ಗೋರಖ್‌ಪುರ 15024 –
ಗುರುವಾರ ಯಶವಂತಪುರದಿಂದ 23:40ಕ್ಕೆ ಸಂಚಾರ (11.40ಕ್ಕೆ)
ತಲುಪುವುದು – 16:24 ಗಂಟೆಗೆ, ಶನಿವಾರ ಅಯೋಧ್ಯಧಾಮ (4.24ಕ್ಕೆ)

2) ಯಶವಂತಪುರ – ಲಕ್ನೋ ಎಕ್ಸ್‌ಪ್ರೆಸ್‌ 12539 –
ಬುಧವಾರ ಯಶವಂತಪುರದಿಂದ 13:30ಕ್ಕೆ (1.30ಕ್ಕೆ)
ತಲುಪುವುದು – 10:35ಕ್ಕೆ ಶುಕ್ರವಾರ

3) ಯಶವಂತಪುರ – ಲಕ್ನೋ ಎಕ್ಸ್‌ಪ್ರೆಸ್‌ 22683
ಸೋಮವಾರ – ಯಶವಂತಪುರದಿಂದ – 23:40ಕ್ಕೆ (11.40ಕ್ಕೆ)
ತಲುಪುವುದು – ಲಕ್ನೋ – ಬುಧವಾರ 18:10 ಬಾದ್ ಶಾ ನಗರ ರೈಲು ನಿಲ್ದಾಣ (6.10ಕ್ಕೆ)

4) ಯಶವಂತಪುರ – ಗೋರಖ್‌ಪುರ 12592
ಯಶವಂತಪುರ : ಸೋಮವಾರ :17:05ಕ್ಕೆ ಸಂಚಾರ ಆರಂಭ (5.05ಕ್ಕೆ)
ತಲುಪುವುದು – ಬುಧುವಾರ 10:10ಕ್ಕೆ ಬಾದ್‌ಶಾ ನಗರ ನಿಲ್ದಾಣ

5) ಯಶವಂತಪುರ- ಗೋರಖ್‌ಪುರ 22534
ಬುಧವಾರ : 23:40ಕ್ಕೆ ಸಂಚಾರ ಆರಂಭ (11.40)
ತಲುಪುವುದು – ಶುಕ್ರವಾರ 13:45ಕ್ಕೆ ಬಾದ್‌ಶಾ ನಗರ ನಿಲ್ದಾಣ (1.45ಕ್ಕೆ)

ಇನ್ನು ಕಳೆದ 1 ವಾರದಿಂದಲೂ ಅಯೋಧ್ಯೆಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪ್ರಯಾಣಿಕರಿಂದ ಹೆಚ್ಚುವರಿ ರೈಲು ಸೇವೆಗೂ ಮನವಿ ಬರ್ತಿವೆ. ಹೀಗಾಗಿ ಬೆಂಗಳೂರು, ಮೈಸೂರು ಹಾಗೂ ಇತರೆ ಕೆಲ ಭಾಗಗಳಿಂದಲೂ ರೈಲು ಸೇವೆ ಆರಂಭವಾಗುವ ಸಾಧ್ಯತೆಗಳಿವೆ.

ಹೆಚ್ಚುವರಿ ರೈಲು ಓಡಾಟಕ್ಕೆ ನೈರುತ್ಯ ವಲಯದ ರೈಲ್ವೆ ಅಧಿಕಾರಿಗಳು ಕೂಡ ಸಿದ್ಧತೆಗಳನ್ನ ಮಾಡಿಕೊಳ್ತಿದ್ದಾರೆ.

 

RELATED ARTICLES

Related Articles

TRENDING ARTICLES