Wednesday, January 22, 2025

ಗೋದ್ರಾ ದುರಂತದಲ್ಲಿ ಸಾವಿಗೀಡಾದ 19 ಕುಟುಂಬಗಳಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ!

ಅಹಮದಾಬಾದ್: ಜ.22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಟಾ ಕಾರ್ಯಕ್ರಮಕ್ಕೆ 2002ರಲ್ಲಿ ಗುಜರಾತ್​ ನ ಗೋಧ್ರಾ ರೈಲು ದುರಂತದಲ್ಲಿ ಪ್ರಾಣ ಕಳೆದುಕೊಂಡ 59 ಜನರ ಪೈಕಿ 19 ಕರಸೇವಕರ ಕುಟುಂಬಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಈ ಕುರಿತು ವಿಎಚ್‌ಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗೋಧ್ರಾ ರೈಲು ನಿಲ್ದಾಣದ ಬಳಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಮೃತಪಟ್ಟ ಕರಸೇವಕರ ಕುಟುಂಬದವರೂ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆಹ್ವಾನಿತರಾಗಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಗುಜರಾತ್ ಪ್ರಧಾನ ಕಾರ್ಯದರ್ಶಿ ಅಶೋಕ್ ರಾವಲ್ ಹೇಳಿದ್ದಾರೆ. ಈ ಕರಸೇವಕರು ಅಯೋಧ್ಯೆಯಿಂದ ಅಹಮದಾಬಾದ್‌ಗೆ ಹಿಂತಿರುಗುತ್ತಿದ್ದರು.

ಇದನ್ನೂ ಓದಿ:ನಾನು ರಾಮ ಮಂದಿರಕ್ಕೆ ಹೋಗಲ್ಲ ಬದಲಿಗೆ ಅಣ್ಣಮ್ಮ,ಮಾರಮ್ಮನ ಪೂಜೆ ಮಾಡ್ತೀನಿ: ಬಿಕೆ ಹರಿಪ್ರಸಾದ್

39 ಕರಸೇವಕರ ಪೈಕಿ 20 ಮಂದಿ ಕರಸೇವಕರ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ವಿಎಚ್‌ಪಿಗೆ ಸಾಧ್ಯವಾಯಿತು. ಅವರ ಸಂಪರ್ಕ ವಿವರಗಳು ಲಭ್ಯವಿದೆ ಎಂದು ಅವರು ಹೇಳಿದರು. ಇವರಲ್ಲಿ 19 ಮಂದಿ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ವಿಎಚ್‌ಪಿ 225 ಕೋಟಿ ರೂಪಾಯಿ ಸಂಗ್ರಹಿಸಿ ಕೊಡುಗೆ ನೀಡಿದೆ ಎಂದು ರಾವಲ್ ಹೇಳಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES