Wednesday, January 22, 2025

ನರೇಗಾದಲ್ಲಿ ಅಕ್ರಮ ಎಸಗಿದ ಒಂದೇ ಜಿಲ್ಲೆಯ 32 ಪಿಡಿಒ ಗಳ ಅಮಾನತು!

ರಾಯಚೂರು: ನರೇಗ ಯೋಜನೆಯಡಿ 150 ಕೋಟಿಗೂ ಅಧಿಕ ಹಣ ಅಕ್ರಮ ಬಳಕೆ ಹಿನ್ನೆಲ ಜಿಲ್ಲೆಯ ದೇವದುರ್ಗ ತಾಲೂಕಿನ 32 ಪಿಡಿಓಗಳನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯ್ತಿ ಸಿಇಒ ಪಾಂಡೆ ರಾಹುಲ್ ತುಕಾರಾಂ ಆದೇಶಿಸಿದ್ದಾರೆ.

2020-21 ರಿಂದ 2022-23ರ ಸಾಲಿನ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು. ಲೆಕ್ಕ ಪರಿಶೋಧನಾ ಸಮಿತಿ ತನಿಖೆ ವೇಳೆ ಭ್ರಷ್ಟಾಚಾರ ನಡೆದಿರುವುದು ಖಚಿತವಾಗಿದೆ. ಈ ಹಿನ್ನೆಲೆ ಜಿಲ್ಲೆಯ 32 ಪಿಡಿಒಗಳನ್ನು ಅಮಾನತಿಗೆ ಆದೇಶಿಸಲಾಗಿದೆ.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಸಾರ್ವತ್ರಿಕ ರಜೆ ನೀಡುವಂತೆ ಸರ್ಕಾರಕ್ಕೆ ಮನವಿ!

ಈ ಕುರಿತು ರಾಯಚೂರು ಜಿಲ್ಲಾ ಪಂಚಾಯ್ತಿ ಸಿಇಒ ಪಾಂಡೆ ರಾಹುಲ್ ತುಕಾರಾಂ ಪ್ರತಿಕ್ರಿಯೆ ನೀಡಿದ್ದಾರೆ. ದೇವದುರ್ಗ ತಾಲೂಕಿನ 33 ಪಂಚಾಯ್ತಿಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ, ಇದಕ್ಕೆ ಸಂಬಂಧಿಸಿ 32 ಪಿಡಿಒ ಗಳನ್ನು ಅಮಾನತು ಮಾಡಲಾಗಿದೆ ಈ ಪೈಕಿ ನಮ್ಮ ಜಿಲ್ಲೆಯಲ್ಲಿರು 27 ಪಿಡಿಒಗಳನ್ನು ನೇರ ಅಮಾನತು ಮಾಡಲಾಗಿದ್ದು ಉಳಿದ 5 ಮಂದಿಯನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ಇನ್ನು ಪಿಡಿಒಗಳ ವರ್ಗಾವಣೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಬಳಿಕ ಸರ್ಕಾರದ ಸೂಚನೆ ಮೇರೆಗೆ ಅಕ್ರಮ ಎಸಗಿರುವ ಪಿಡಿಒಗಳ ವಿರುದ್ದ ಎಫ್​ ಐ ಆರ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES