Thursday, April 3, 2025

ಅವಳ ಗಂಡ, ಇವನ ಹೆಂಡತಿ ಪರಾರಿ: ಪೊಲೀಸ್​ ಠಾಣೆ ಮೆಟ್ಟಿಲೇರಿದ ಎರಡು ಕುಟುಂಬಗಳು!

ಬೆಂಗಳೂರು: ಗಂಡ ಕಾಣೆಯಾಗಿದ್ದಾನೆಂದು ಒಬ್ಬಳು ಹೆಂಡತಿ ಹಾಗು ಹೆಂಡತಿ ಕಾಣೆಯಾಗಿದ್ದಾಳೆಂದು ಒಬ್ಬ ಗಂಡ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಸುಮೈಯಾ ಬಾನು ಗಂಡ ಬೇಕು ಎಂದು ದೂರು ನೀಡಿದ ಹೆಂಡತಿ, ವಸೀಂ ಸುಮೈಯಾ ಗಂಡ. ಇನ್ನು ಮತ್ತೊಂದು ಪ್ರಕರಣದಲ್ಲಿ ಪರಾರಿಯಾಗಿರುವ ಹೆಂಡತಿ ದಲ್ಷಾದ್​ ಳನ್ನು ಹುಡುಕಿಕೊಡುವಂತೆ ಪತಿ ನಯೀಂ ದೂರು ನೀಡಿದ ಪತಿ.

ಇದನ್ನೂ ಓದಿ: ಸಾನಿಯಾ ಬಿಟ್ಟು ನಟಿ ಸನಾ ಜಾವೇದ್​ ಕೈ ಹಿಡಿದ ಶೋಯೇಬ್ ಮಲ್ಲಿಕ್​!

ಕಳೆದ ಏಳು ವರ್ಷಗಳ ಹಿಂದೆ ಸುಮೈಯಾ ಬಾನು ಮತ್ತು ವಾಸಿಂ ಇಬ್ಬರು ಮದುವೆಯಾಗಿದ್ದರು ಇವರ ಮದುವೆಗೆ ಸಾಕ್ಷಿಯಾಗಿ ಒಂದು ಹೆಣ್ಣು ಮಗು ಕೂಡ ಇದೆ. ಆದರೇಮ ಇತ್ತೀಚೆಗೆ ಸುಮೈಯಾ ಬಾನು ಪತಿ ವಸೀಂ ಮತ್ತು ದಿಲ್​ ಷಾದ್​ ಎಂಬಾಕೆಯ ನಡುವೆ ಪ್ರೀತಿಸುತ್ತಿದ್ದರು ಕಳೆದ ತಿಂಗಳು ವಸೀಂ ಹಾಗು ದಿಲ್ಷಾದ್​ ಇಬ್ಬರು ಒಂದೇ ಹೋಟೆಲ್​ ನಲ್ಲಿ ಇದ್ದರು. ವಿಚಾರ ತಿಳಿದ ವಸೀಂ ಪತ್ನಿ ಸುಮಯಾ ಮತ್ತು ಕುಟುಂಬಸ್ಥರು ಇಬ್ಬರನ್ನು ಹೋಟೆಲ್​ ನಲ್ಲಿ ರೆಡ್​ ಹ್ಯಾಂಡ್​ ಆಗಿ ಹಿಡಿದು ದೊಡ್ಡರಾದ್ದಾಂತವೇ ಆಗಿತ್ತು. ಬಳಿಕ ಇಬ್ಬರಿಗೂ ಬುದ್ದಿವಾದ ಹೇಳಿ ಕಳಿಸಲಾಗಿತ್ತು.

ಇದೀಗ ಮತ್ತೆ ವಸೀಂ ಹಾಗೂ ದಿಲ್ಷಾದ್ ಇಬ್ಬರು ಪರಾರಿಯಾಗಿದ್ದಾರೆ. ಹೀಗಾಗಿ ಸುಮೈನಾ ಭಾನು ನನ್ನ ಗಂಡನನ್ನು ಹುಡುಕಿಕೊಡಿ ಅಂತ ಠಾಣೆಗೆ ದೂರು ನೀಡಿದ್ದರೇ ಇತ್ತ ದಿಲ್ಷಾದ್ ಗಂಡ ನಯೀಂನಿಂದಲೂ ನನ್ನ ಹೆಂಡತಿಯನ್ನು ಹುಡುಕಿಕೊಡಿ ಎಂದು ದೂರು ನೀಡಿದ್ದಾರೆ.ಸದ್ಯ ಎರಡು ದೂರುಗಳನ್ನು ಸ್ವೀಕರಿಸಿರುವ ಪೊಲೀಸರೂ ತನಿಖೆ ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES