Thursday, January 23, 2025

ನಟ ದುನಿಯಾ ವಿಜಯ್ ಹುಟ್ಟುಹಬ್ಬದಂದೇ ಹೊಸ ಸಿನಿಮಾ ಅನೌನ್ಸ್‌! 

ಬೆಂಗಳೂರು: ಸ್ಯಾಂಡಲ್‌ವುಡ್‌ ಸಲಗ ನಟ ದುನಿಯಾ ವಿಜಯ್ ಅವರಿಗೆ 50ನೇ ಹುಟ್ಟುಹಬ್ಬದ ಸಂಭ್ರಮ.

ನಟ ದುನಿಯಾ ವಿಜಯ್, ಅವರ ತಂದೆ ತಾಯಿಯ ಸಮಾಧಿ ಬಳಿಯೇ ಕೇಕ್ ಕತ್ತರಿಸಿ  ತಮ್ಮ ಬರ್ತ್‌ಡೇ ಸೆಲಬ್ರೆಟ್ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರ ನಟನೆ ಮತ್ತು ನಿರ್ದೇಶನದ ಬಹುನಿರೀಕ್ಷಿತ ‘ಭೀಮ’ ಸಿನಿಮಾದ ಟೀಸರ್ ಕೂಡ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ಅಷ್ಟೇ ಅಲ್ಲದೇ ದುನಿಯಾ ವಿಜಯ್‌ ಅವರ VK29 (29ನೇ ಸಿನಿಮಾ) ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.

VK29

ಈ ಪೋಸ್ಟರ್‌ನಲ್ಲಿ ಇದು ಆಳಿದವರ ಕಥೆಯಲ್ಲ.. ಅಳಿದು ಉಳಿದವರ ಕಥೆ.. ಎನ್ನುವ ಅಡಿ ಬರಹ ಕೊಟ್ಟಿದ್ದಾರೆ. ಮಣ್ಣಿನ ಕಥೆಗಳಿಗೆ ಹೆಸರುವಾಸಿಯಾಗಿರುವ ಜಡೇಶ್ VK29 ಮೂಲಕ ಮತ್ತೊಂದು ಸೊಗಡಿನ ಸಿನಿಮಾ ಮಾಡುವ ಸೂಚನೆ ನೀಡಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರ ಹಿರಿಯ ಮಗಳು ಮೋನಿಕಾ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಈ ಚಿತ್ರದ ಕುರಿತ ಇನ್ನಷ್ಟು ವಿಶೇಷ ವಿಚಾರಗಳನ್ನು ಮುಂದಿನ ದಿನಗಳಲ್ಲಿ ಹೇಳಿಕೊಳ್ಳುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

 ತಾರಾಗಣ

ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ ಮತ್ತು ಪ್ರಿಯಾ ಶಠಮರ್ಷಣ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ,ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ ಭೀಮನಿಗಿದೆ.

ಫ್ಯಾನ್ಸ್ ಜೊತೆ ಬರ್ತ್​ ಡೇ ಸೆಲೆಬ್ರೇಷನ್ 

ನಟ ದುನಿಯಾ ವಿಜಯ್ ತಮ್ಮ ಹುಟ್ಟುರಾದ ಕುಂಬಾರನಹಳ್ಳಿಯಲ್ಲಿ ಅಭಿಮಾನಿಗಳ ಜತೆಗೆ ವಿಶೇಷವಾಗಿ ಬರ್ತ್‌ಡೇ ಸೆಲಬ್ರೆಟ್‌ ಮಾಡಲಿದ್ದಾರೆ. “ದಯವಿಟ್ಟು ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾವ ಅಭಿಮಾನಿಗಳು ಸಹ ಈ ಬಾರಿ ನಡೆದುಕೊಂಡು ಬರಬೇಡಿ, ಯಾರು ಕೇಕ್ ಮತ್ತು ಹೂವಿನ ಹಾರ ತರಬೇಡಿ . ನನಗೆ ನಿಮ್ಮ ಜತೆಗೆ ಕುಳಿತು ಪ್ರೀತಿಯಿಂದ ಊಟ ಮಾಡುವ ಆಸೆಯಿದೆ” ಎಂದು ಮನವಿ ಮಾಡಿದ್ದಾರೆ.

 

RELATED ARTICLES

Related Articles

TRENDING ARTICLES