ಹೊಸಕೋಟೆ: ನಗರದ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ನಡೆದ 44ನೇ ಸ್ಟೇಟ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -2024 ರಲ್ಲಿ ದೊಡ್ಡಬಳ್ಳಾಪುರದ ಶಿಕ್ಷಕರು ಉತ್ತಮ ಸಾಧನೆ ಮಾಡಿದ್ದಾರೆ.
ನಗರದ ಕಾರ್ಮೆಲ್ ಜ್ಯೋತಿ ಶಾಲಾ ಶಿಕ್ಷಕ ಮಲ್ಲಿಕಾರ್ಜುನ್ ಹೊಸಕೋಟೆಯಲ್ಲಿ ನಡೆದ 30 ವರ್ಷಗಳ ವಯೋಮಾನ ವಿಭಾಗದ ಚಾಂಪಿಯನ್ಶಿಪ್ ನಲ್ಲಿ ನಡೆದ ವಿವಿಧ ವಿಭಾಗದ ಕ್ರೀಡೆಗಳಾದ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಪ್ರಥಮ, ಲಾಂಗ್ ಜಂಪ್ ನಲ್ಲಿ ಪ್ರಥಮ 200 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಪಡೆಯುವ ಮೂಲಕ ಮಹಾರಾಷ್ಟ್ರದ ಪುಣೆಯಲ್ಲಿ ಫೆಬ್ರವರಿ 13 ರಿಂದ 17 ರ ವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಬೋಯಿಂಗ್ ಬೆಂಗಳೂರಿನ ಐಡೆಂಟಿಟಿ ಬದಲಿಸಲಿದೆ: ಪ್ರಧಾನಿ ಮೋದಿ!
ಇವರೊಂದಿಗೆ ನಗರದ ಸರ್ಕಾರಿ ಶಾಲಾ ಶಿಕ್ಷಕ ಮುಕೇಶ್ ಅವರು 50 ವರ್ಷ ವಿಭಾಗದಲ್ಲಿ ಲಾಂಗ್ ಜಂಪ್ ಪ್ರಥಮ, ನೂರು ಮೀಟರ್ ಹರ್ಡಲ್ಸ್ ತೃತೀಯ ಹಾಗು ಟ್ರಿಪಲ್ ಜಂಪ್ ನಲ್ಲಿ ದ್ವಿತಿಯ ಸ್ಥಾನ ಪಡೆದಿದ್ದಾರೆ ಇವರಿಗೆ ಶಾಲಾ ಸಿಬ್ಬಂದಿಗಳು ಹಾಗು ತಾಲೂಕಿನ ಜನತೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.