ಹಾವೇರಿ: ಸಾಮಾನ್ಯವಾಗಿ ಚಿತ್ರಕಲಾವಿದರು ಬೆರಳುಗಳ ಸಹಾಯದಿಂದ ಕುಂಚದಲ್ಲಿ ಚಿತ್ರಗಳನ್ನ ಬಿಡಿಸುವುದನ್ನು ನೋಡಿರರುತ್ತೇವೆ. ಇನ್ನೂ ಕೆಲವರು ಬೆರಳುಗಳಲ್ಲಿ ಕುಂಚ ಕಟ್ಟಿಕೊಂಡು ಚಿತ್ರಬಿಡಿಸುವುದು ತಮ್ಮ ಮೂಗಿನ ಸಹಾಯದಿಂದ ಸಹ ಚಿತ್ರ ಬಿಡಿಸುವುದು ಉಂಟು ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ನಾಲಿಗೆ ಮೂಲಕ ಚಿತ್ರ ಬರೆದು ಎಲ್ಲಾರ ಗಮನ ಸಳೆದಿದ್ದಾನೆ.
ಹೌದು, ರಾಮಮಂದಿರ ಉದ್ಘಾಟನೆಗೆ ಹಿನ್ನಲೇಯಲ್ಲಿ ದೇಶದೆಲ್ಲೇಡೆ ಎಲ್ಲಿ ನೋಡಿದಲ್ಲಿ ಜೈ ಶ್ರೀರಾಮ್ ಎನ್ನುತ್ತಾ ರಾಮನಾಮನ ಜಪ ಆರಂಭವಾಗಿದ್ದು,ರಾಮನಿಗೆ ತಮ್ಮ ಕಲೆಯಿಂದಲ್ಲೇ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ.
ತನ್ನ ನಾಲಿಗೆಯಿಂದಲೇ ಚಿತ್ರ ಬಿಡಿಸುವ ಕಲಾ ಮಾಂತ್ರಿಕ ಚನ್ನಬಸಪ್ಪ ತೊಪ್ಪಲ ಅವರು ಕೈ ಸಹಾಯ ಇಲ್ಲದೆ ಹಾಗೂ ಕುಂಚದ ಸಹಾಯ ಇಲ್ಲದೆ ತನ್ನ ಕಲಾ ವಿದ್ಯೆಯಿಂದಲ್ಲೇ ಬರಿ ನಾಲಿಗೆಯಿಂದ ರಾಮನ ಚಿತ್ರವನ್ನು ಬಿಡಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾನೆ.
ಈತ ಸತತ ಎರಡು ವರ್ಷದಿಂದ ಪೇಂಟಿಂಗ್ ಮಾಡುವ ಮೂಲಕ ಸಾಕಷ್ಟು ಹೆಸರು ಮಾಡಿದ್ದಾನೆ.
ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಚನ್ನಬಸಪ್ಪ ತೊಪ್ಪಲ ಸದ್ಯ ಸರ್ಕಾರಿ ಕೈಗಾರಿಕೆ ಸಂಸ್ಥೆ ಗುತ್ತಲದಲ್ಲಿ ಐಟಿಐನ ಎರಡನೇ ವರ್ಷದ ಎಲೆಕ್ಟ್ರಿಕ್ ಮ್ಯಾಕ್ಯಾನಿಕಲ್ ಬ್ರ್ಯಾಂಚ್ ನ ವಿದ್ಯಾರ್ಥಿಯಾಗಿದ್ದಾನೆ. ಇವನು
ಕಾಲೇಜಿನ ಬಿಡುವಿನ ಸಮಯದಲ್ಲಿ ಅದ್ಬುತ ಕಲೆ ಕಳಿತ್ತಿದ್ದಾನೆ.
ಚಾರ್ಲಿ ಚಾಪ್ಲಿನ್, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಚಂದ್ರಯಾನ ಚಿತ್ರಗಳನ್ನು ಸರಾಗವಾಗಿ ಬಿಡುಸುವ ಈ ಕಲೆಗಾರ. ಈಗ ರಾಮನ ಚಿತ್ರ ಬಿಡಿಸುವ ಮೂಲಕ ರಾಮನಿಗೆ ಹಾಗೂ ರಾಮಮಂದಿರಕ್ಕೆ ಗೌರವ ಸಲ್ಲಿಸಿದ್ದಾನೆ.