ಬೆಂಗಳೂರು: ಇತ್ತೀಚೆಗೆ ತೆರೆಕಂಡ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯದ ʼಅನ್ನಪೂರ್ಣಿʼ ಚಿತ್ರ ಬಾರೀ ವಿವಾದಕ್ಕೆ ಕಾರಣವಾಗಿತ್ತು.
ಹೌದು, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ ಎಂದು ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ಕೇಸ್ ಕೂಡ ದಾಖಲಿಸಿದ್ದರು.ಇದಾದ ಬಳಿಕ ನೆಟ್ಫ್ಲಿಕ್ಸ್ ಎಚ್ಚೆತ್ತುಕೊಂಡಿದ್ದು, ಸಿನಿಮಾವನ್ನು ಡಿಲೀಟ್ ಕೂಡ ಮಾಡಲಾಗಿತ್ತು. ಅಂದ್ರೆ ಇದೀಗ ನಟಿ ನಯನತಾರಾ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್‌ಸ್ಟಾದಲ್ಲಿ ನಟಿ ಪೋಸ್ಟ್ ಮಾಡಿ ʻʻಭಾರವಾದ ಹೃದಯದಿಂದ ನಮ್ಮ ‘ಅನ್ನಪೂರ್ಣಿ’ ಚಿತ್ರಕ್ಕೆ ಸಂಬಂಧಿಸಿದ ಇತ್ತೀಚಿನ ಘಟನೆಗಳ ಬಗ್ಗೆ ಸತ್ಯದ ಆಧಾರದ ಮೇಲೆ ಬರೆಯುತ್ತಿದ್ದೇನೆ. ‘ಅನ್ನಪೂರ್ಣಿ’ ಕೇವಲ ಲಾಭಕ್ಕಾಗಿ ಸಿನಿಮಾ ಮಾಡಿಲ್ಲ. ಒಂದು ಸಂದೇಶ ತಿಳಿಸುವ ಉದ್ದೇಶದಿಂದ ಕೂಡ ಮಾಡಿದೆವು.
ಇದನ್ನೂ ಓದಿ: ಕಾಂಗ್ರೆಸ್ಗಾಗಿ ನನ್ನ ಪ್ರಾಣವನ್ನೇ ತೆತ್ತಿದ್ದೇನೆ, ಅವರಿಂದ ಸಿಕ್ಕಿದ್ದೇನು? : ಹೆಚ್.ಡಿ. ದೇವೇಗೌಡ ಭಾವುಕ
ಯಾರ ಭಾವನೆ ಅಥವಾ ನಂಬಿಕೆಗೆ ಧಕ್ಕೆ ತರುವುದು ನನ್ನ ತಂಡದ ಉದ್ದೇಶ ಆಗಿರಲಿಲ್ಲ.
ನಾನು ದೇವರನ್ನು ಸಂಪೂರ್ಣವಾಗಿ ನಂಬುವ ಮತ್ತು ಆಗಾಗ ದೇಶಾದ್ಯಂತ ದೇವಾಲಯಗಳಿಗೆ ಭೇಟಿ ನೀಡುವ ವ್ಯಕ್ತಿ. ನಿಮ್ಮ ಭಾವನೆಗಳಿಗೆ ನೋವುಂಟು ಮಾಡಿದ ಎಲ್ಲ ಜನರಲ್ಲಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ.
Spread Positivity 👍God Bless😇 pic.twitter.com/vFj6JHdzGp
— Nayanthara✨ (@NayantharaU) January 18, 2024
ಕಳೆದ ಎರಡು ದಶಕಗಳಿಂದ ಚಲನಚಿತ್ರೋದ್ಯಮದಲ್ಲಿ ಇರುವ ನಾನು ಪರಸ್ಪರ ಕಲಿಯುವುದು ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದ್ದೇನೆ, ನಮನಗಳೊಂದಿಗೆ, ನಯನತಾರಾʼʼಎಂದು ಬರೆದುಕೊಂಡಿದ್ದಾರೆ.