ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಆಗಮಿಸಲಿರುವ ಎಲ್ಲಾ ಮುಖ್ಯ ಅತಿಥಿಗಳಿಗೆ ವಿಶೇಷ ಉಡುಗೊರೆಗಳನ್ನು ನೀಡಲು ತಯಾರಿ ನಡೆಸಲಾಗಿದೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದೇಶದ ಎಲ್ಲಾ ರಾಜ್ಯಗಳ ವಿವಿಧ ಗಣ್ಯರಿಗೆ ಶ್ರೀ ರಾಮಜನ್ಮಭೂಮಿ ತೀರ್ಥ ಟ್ರಸ್ಟ್ ವತಿಯಿಂದ ಆಹ್ವಾನ ಪತ್ರಿಕೆಗಳನ್ನು ಕಳಿಸಲಾಗಿದೆ. ಅಂದು ಆಗಮಿಸುವ ಗಣ್ಯರಿಗೆ ಗುಜರಾತ್ ಮೂಲದ ಟ್ರಸ್ಟ್ ವತಿಯಿಂದ ವಿಶೇಷ ಉಡುಗೊರೆಗಳನ್ನು ತಯಾರಿಸಿದ್ದು ಗಣ್ಯರಿಗೆ ನೀಡಲು ಸಿದ್ದತೆ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ಇಂದು ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ!
ರಾಮಮಂದಿರ ಉದ್ಘಾಟನೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ, ದೇವಾಲಯದಲ್ಲಿ ಉದ್ಘಾಟನ ಪೂರ್ವ ಸಿದ್ದತಾ ಕಾರ್ಯಗಳು ಬರದಿಂದ ಬಾಗಿದೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಲಿರುವ 2200 ಗಣ್ಯಾತಿ ಗಣ್ಯರಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಗುತ್ತಿದೆ.
ಈ ಉಡುಗೊರೆ ಪೆಟ್ಟಿಗೆಯಲ್ಲಿ ರಾಮಜನ್ಮ ಭೂಮಿಯ ಪವಿತ್ರ ಮಣ್ಣು, ಸರಯೂ ನದಿಯ ನೀರು, ಸಾಲಿಗ್ರಾಮ, ರಾಮನ ಬಿಲ್ಲು ಒಳಗೊಂಡಂತೆ ಒಂದು ಬೆಳ್ಳಿ ಕಾಯಿನ್ ಇರಲಿದೆ. ದೇವಾಲಯಕ್ಕೆ ಆಗಮಿಸುವ ಗಣ್ಯರು ಈ ಉಡುಗೊರೆಯನ್ನು ಪಡೆದುಕೊಳ್ಳಲಿದ್ದಾರೆ ಉಳಿದಂತೆ ಗಣ್ಯರ ಮನೆ ಮತ್ತು ಪೋಸ್ಟ್ ಮೂಲಕ ಉಡುಗೊರೆ ರವಾನೆ ಮಾಡಲಾಗುತ್ತದೆ.