Saturday, November 2, 2024

ಮಾಲ್ ಆಫ್ ಏಷ್ಯಾದಲ್ಲಿ ರಾಮಮಂದಿರ ಉದ್ಘಾಟನೆಯ ಲೈವ್ ಟೆಲಿಕಾಸ್ಟ್​​ಗೆ ಮನವಿ!

ಬೆಂಗಳೂರು: ಜನವರಿ 22ರಂದು ಅಯ್ಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಪ್ರತಿಷ್ಠಾಪನಾ ಕಾರ್ಯಕ್ರಮವನ್ನ ಮಾಲ್ ಆಫ್ ಏಷ್ಯಾದಲ್ಲಿ LED ಮೂಲಕ ಪ್ರದರ್ಶಸುವಂತೆ ಹಿಂದೂ ಸಂಘಟನೆ ಮನವಿ ಮಾಡಿದೆ.

ರಾಜ್ಯದ ಎಲ್ಲಾ ಹಿಂದೂಪರ ಸಂಘಟನೆಗಳ ಪರವಾಗಿ ರಾಷ್ಟ್ರ ರಕ್ಷಣಾ ಪಡೆಯ ಮುಖ್ಯಸ್ಥ ಪುನೀತ್​ ಕೆರೆಹಳ್ಳಿ ಹಾಗೂ ಇತರರು ಇಂದು ಬೆಂಗಳೂರಿನ ಫೀನಿಕ್ಸ್​ ಮಾಲ್​ ಆಫ್​ ಏಷಿಯಾದ ಆಡಳಿತ ಸಿಬ್ಬಂದಿಗೆ ಮನವಿಯೊಂದನ್ನು ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್ ಮಿಡ್‌ ವೀಕ್‌ ಎಲಿಮಿನೇಶನ್​​​​​​; ದೊಡ್ಮನೆಯಿಂದ ಬೆಂಕಿ ತನಿಷಾ ಔಟ್‌

ಕಳೆದ ಡಿಸೆಂಬರ್​ ನಲ್ಲಿ ಕ್ರಿಸ್ಮಸ್​ ಆಚರಣೆ ಯನ್ನು ಮಾಲ್ ಆಫ್ ಏಷಿಯಾದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು ಮಾಲ್​ ನ ದೊಡ್ಡ ಪರದೆಗಳಲ್ಲಿ ಕ್ರಿಸ್​ ಸಂಭ್ರಮ ರಾರಾಜಿಸಿತ್ತು, ಇದೀಗ ಅದೇ ಮಾದರಿಯಲ್ಲಿ ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಚಿತ್ರಣವನ್ನು ಮಾಲ್​ ನ ದೊಡ್ಡ ದೊಡ್ಡ ಪರದೆಗಳಲ್ಲಿ ಲೈವ್ ಪ್ರದರ್ಶನ ಮಾಡುವಂತೆ ಮನವಿ ಮಾಡಲಾಗಿದೆ. ಸದ್ಯ ಈ ಮನವಿಗೆ ಮಾಲ್​ ನ ಆಡಳಿತ ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಕನ್ನಡ ನಾಮ ಫಲಕ ವಿಚಾರದಲ್ಲಿ ಮಾಲ್ ಆಪ್ ಏಷ್ಯಾ ಕನ್ನಡಿಗರ ಕೆಂಗಣ್ಣಿಗೆ ಗುರುಯಾಗಿತ್ತು. ಇದೀಗ ಹಿಂದೂ ಸಂಘಟನೆಗಳ ಕಾರ್ಯಕರ್ತರು ರಾಮ ಲಲ್ಲಾ ಪ್ರತಿಷ್ಠಾಪನೆಯನ್ನು ಲೈವ್ ಟೆಲಿಕಾಸ್ಟ್ ಮಾಡುವಂತೆ ಆಡಳಿತ ಮಂಡಳಿ ಮೇಲೆ ಒತ್ತಡ ಹೇರಿದ್ದಾರೆ.

RELATED ARTICLES

Related Articles

TRENDING ARTICLES