Sunday, December 22, 2024

ರಾಮಮಂದಿರ ಚಿತ್ರವುಳ್ಳ ಪೋಸ್ಟಲ್​ ಸ್ಟಾಂಪ್​ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ!

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂಭ್ರಮದ ನಡುವೆ ಪ್ರಧಾನಿ ಮೋದಿ ಯವರು ರಾಮಮಂದಿರದ ಚಿತ್ರಗಳಿರುವ ಪೋಸ್ಟಲ್ ಸ್ಟಾಂಪ್ ಗಳನ್ನು ಇಂದು ಬಿಡುಗಡೆಗಿಳಿಸಿದ್ದಾರೆ.

ದೆಹಲಿಯಲ್ಲಿ ರಾಮಮಂದಿರದ 6 ಪೋಸ್ಟಲ್​ ಸ್ಟಾಂಪ್​ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸರಯೂ ನದಿಯ ತೀರದಲ್ಲಿ ಮಂದಿರ ನಿರ್ಮಾಣದ ಚಿತ್ರ, ನೂತನವಾಗಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಚಿತ್ರಣ,  ಶಬರಿ ಸಹಿತ ರಾಮಾಯಣದ ಪಾತ್ರಧಾರಿಗಳ ಚಿತ್ರಗಳು ಇರುವ ಪೊಸ್ಟಲ್​ ಸ್ಟಾಂಪ್​ಗಳನ್ನು ಬಿಗುಗಡೆಗೊಳಿಸಿದ್ದಾರೆ.

ಇದನ್ನೂ ಓದಿ: ನಟ ಸುದೀಪ್ ಹಾಗು ಫ್ಯಾನ್ಸ್​ ಗೆ ಕ್ಷಮೆ ಕೇಳಿದ ಬುಲೆಟ್ ಪ್ರಕಾಶ್​ ಪುತ್ರ ರಕ್ಷಕ್​!

ಜನವರಿ 22 ರಂದು ರಾಮಮಂದಿರ ಉದ್ಘಾಟನ ಕಾರ್ಯಕ್ರವ ನಡೆಯಲಿದ್ದು ಪೂರ್ವ ತಯಾರಿಗಳು ಭರಪೂರವಾಗಿ ನೆರವೇರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದರೊಂದಿಗೆ ದೇಶದ ಅನೇಕ ಗಣ್ಯರಿಗೂ ಉದ್ಗಾಟನಾ ಕಾರ್ಯಕ್ರಕ್ಕೆ ಆಹ್ವಾನ ನೀಡಲಾಗಿದೆ.

RELATED ARTICLES

Related Articles

TRENDING ARTICLES