Sunday, December 22, 2024

ನೂತನ ಸಾರಿಗೆ ನಿಯಮಗಳ ವಿರುದ್ಧ ಲಾರಿ ಚಾಲಕರಿಂದ ವಿನೂತನ ಪ್ರತಿಭಟನೆ

ಕೋಲಾರ : ಕೇಂದ್ರ ಸರ್ಕಾರದ ನೂತನ ಸಾರಿಗೆ ನಿಯಮಗಳನ್ನ ವಿರೋಧಿಸಿ, ಕೋಲಾರದಲ್ಲಿ ಲಾರಿ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸದ ಚಾಲಕರಿಗೆ ಗುಲಾಬಿ ಹೂವು, ಚಾಕ್ ಲೇಟ್ ನೀಡಿ ಚಪ್ಪಾಳೆ ಹೊಡೆದು ವ್ಯಂಗ್ಯ ಮಾಡುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಪಂಚಾಯಿತಿ ಎದುರು ರಸ್ತೆಗಿಳಿದ ಪ್ರತಿಭಟನಾಕಾರರು, ಲಾರಿ ಹಾಗೂ ಕ್ಯಾಂಟರ್ ಗಳನ್ನ ರಸ್ತೆಗಿಳಿಸದೆ ಪ್ರತಿಭಟನೆಯಲ್ಲಿ ಭಾಗಿಯಾದ ಮಾಲೀಕರು, ಚಾಲಕರು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? : ದ್ರಾಕ್ಷಿ ಬೆಳೆ ನಾಶ : ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಅನ್ನದಾತ

ಮರಣ ಶಾಸನ ಬರೆದಿದೆ

ಪ್ರತಿಭಟನೆಯಲ್ಲಿ ಭಾಗವಹಿಸದ ಸಗಟು ಸಾಗಾಣಿಕೆಯ ಚಾಲಕರಿಗೆ ಗುಲಾಬಿ ಹೂವು ಕೊಟ್ಟು, ಚಾಕ್ ಲೇಟ್ ಕೊಟ್ಟು ಚಪ್ಪಾಳೆ ಹೊಡೆಯುವುದರ ಮೂಲಕ ಪ್ರತಿಭಟನೆ ನಡೆಸಿದರು. ಕೇಂದ್ರದ ನೂತನ ಸಾರಿಗೆ ವಾಹನಗಳ ಕಾಯ್ದೆ ಲಾರಿ ಮಾಲೀಕರಿಗೆ, ಚಾಲಕರಿಗೆ ಮಾರಕವಾಗಿದ್ದು, ಇದರಿಂದ ಮರಣ ಶಾಸನ ಬರೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES