Sunday, December 22, 2024

ಕೆಎಸ್​​ಆರ್​ಟಿಸಿ ಬಸ್​ ಡ್ರೈವರ್-ಕಂಡಕ್ಟರ್​ ಕಾಮಿಡಿ ಪ್ರಸಂಗ; ವಿಡಿಯೋ ಫುಲ್​ ವೈರಲ್​

ಮೈಸೂರು: ಬಸ್​ ನಲ್ಲಿ ಕಂಡಕ್ಟರ್​ ಇಲ್ಲದಿರುವ ಬಗ್ಗೆ ಅರಿವೇ ಇಲ್ಲದೆ ಕೆಎಸ್​ ಆರ್ ಟಿಸಿ ಬಸ್​ ಚಾಲಕನೋರ್ವ ಸುಮಾರು ಒಂದು ಕಿ.ಮೀ ದೂರ ಸಾಗಿ ನಗೆಪಾಟಲಿಗೀಡಾಗಿರುವ ಘಟನೆ ವಿರಾಜಪೇಟೆ ಹಾಗು ಮೈಸೂರು ಮಾರ್ಗ ಮಧ್ಯೆ ಸಂಚಾರದ ವೇಳೆ ನಡೆದಿದೆ.

ವಿರಾಜಪೇಟೆಯಿಂದ ಮೈಸೂರಿಗೆ ಟ್ರಿಪ್​ ಹೋಗಬೇಕಾಗಿತ್ತು. ಬಸ್​ ತುಂಬ ಪ್ರಯಾಣಿಕರು ಭರ್ತಿಯಾಗಿದ್ದರು. ಚಾಲಕನ​ ಸೀಟ್ ಮೇಲೆ ಕೂತ ಡ್ರೈವರ್​ ಬಸ್​ ಸ್ಟಾರ್ಟ್ ಮಾಡಿ ಮುಂದೆ ಸಾಗಿದ್ದಾನೆ, ಬಸ್​ ನಲ್ಲಿದ್ದ ಪ್ರಯಾಣಿಕರು ಟಿಕೆಟ್​ ಖರೀದಿಸಲು ಜೇಬಿನಲ್ಲಿದ್ದ ಹಣವನ್ನು ಸಿದ್ದಪಡಿಸಿಕೊಂಡು ತಮ್ಮ ಪಾಡಿಗೆ ತಾವಿದ್ದಾರೆ. ಆದರೇ, ಈ ನಡುವೆ ಇಷ್ಟೊತ್ತಾದರೂ ಬಸ್​ ನಲ್ಲಿ ಪ್ರಯಾಣಿಕರಿಗೆ ಟಿಕೇಟ್​ ನೀಡಲು ಕಂಡಕ್ಟರ್​ ಬರದಿರುವುದನ್ನು ಕಂಡು ಪ್ರಯಾಣಿಕರು ಸುತ್ತಲು ಹುಡುಕಾಡಿದ್ದಾರೆ.

ಇದನ್ನೂ ಓದಿ: ಸೋತ ಮಾತ್ರಕ್ಕೆ ಮನೆಯಲ್ಲಿ ಕೂರುವುದಿಲ್ಲ ಎಂದ ನಿಖಿಲ್!

ಆಗ, ಬಸ್​ ನಲ್ಲಿ ಕಂಡಕ್ಟರ್​ ಇಲ್ಲದಿರುವ ಬಗ್ಗೆ ಅರಿವಾಗಿದೆ, ಕೂಡಲೇ ಈ ವಿಷಯವನ್ನು ಬಸ್​ ನಲ್ಲಿದ್ದ ಪ್ರಯಾಣಿಕನೋರ್ವ ಚಾಲಕನ ಗಮನಕ್ಕೆ ತಂದಿದ್ದಾನೆ. ವಿಚಾರ ತಿಳಿದು ಗಾಬರಿಯಾದ ಚಾಲಕ ತಕ್ಷಣವೇ ಬಸ್​ ನ್ನು ಮಾರ್ಗ ಮಧ್ಯೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ನೋಡಿಕೊಂಡಿದ್ದಾನೆ.

ಪ್ರಯಾಣಿಕರು ಚಾಲಕನನ್ನು ಪ್ರಶ್ನಿಸಿ ಕಂಡಕ್ಟರ್​ ಗೆ ಫೋನ್ ಮಾಡಿ ಎಂದಿದ್ದಾರೆ, ಕಂಡಕ್ಟರ್ ನಂಬರ್​ ನನ್ನ ಬಳಿ ಇಲ್ಲ ಎಂದಿದ್ದಾನೆ, ಹೋಗಲಿ ಕಂಡಕ್ಟರ್ ಫೋನ್ ಮಾಡ್ತಾನೆ ಕಾಯೋಣ ಎಂದು ಪ್ರಯಾಣಿಕರು ಹೇಳಿದ್ದಾರೆ. ಅದಕ್ಕೆ ಅವನ ಬಳಿಯೂ ನನ್ನ ನಂಬರ್​ ಇಲ್ಲ ಎಂದು ಚಾಲಕ ಉತ್ತರ ಕೊಟ್ಟಿದ್ದಾನೆ. ಈ ಮಾತುಕತೆ ನಡುವೆ ಬಸ್​ ನಿಂತಿದ್ದ ಜಾಗಕ್ಕೆ ಸ್ಕೂಟಿಯಲ್ಲಿ ವೇಗವಾಗಿ ಬಂದ ಕಂಡಕ್ಟರ್ ನಗುನಗುತ್ತಾ  ಬಂದಿಳಿದಿದ್ದಾನೆ. ಇದಾದ ಬಳಿಕ ಅಸಲಿ ವಿಷಯ ಬೆಳಕಿಗೆ ಬಂದಿದೆ.

ಈ ಚಾಲಕ ಮತ್ತು ನಿರ್ವಾಹಕರಿಬ್ಬರು ಇಂದೇ ಹೊಸದಾಗಿ KSRTC ಸಾರಿಗೆಗೆ ಕೆಲಸಕ್ಕೆ ಸೇರಿಕೊಂಡಿದ್ದು ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳಲು ಸಹ ಸಮಯವಿಲ್ಲದೇ ಮೊದಲ ದಿನವೇ ವಿರಾಜಪೇಟೆ to ಮೈಸೂರು ಮಾರ್ಗದ ಬಸ್​ಗೆ ಹತ್ತಿದ್ದಾರೆ ಅಷ್ಟರಲ್ಲಿ ಇಷ್ಟೆಲ್ಲ ನಡೆದಿದೆ ಎಂದು ತಿಳಿದು ಪ್ರಯಾಣಿಕರು ನಕ್ಕು ನಕ್ಕು ಸುಸ್ತಾಗಿದ್ದಾರೆ.

RELATED ARTICLES

Related Articles

TRENDING ARTICLES