ಬೆಳಗಾವಿ : ಭೀಕರ ಬರಕ್ಕೆ ಅನ್ನದಾತರು ತತ್ತರಿಸಿ ಹೋಗಿದ್ದಾರೆ. ಅದ್ರಲ್ಲೂ ದ್ರಾಕ್ಷಿ ಬೆಳೆಗಾರರ ಗೊಳಂತೂ ಹೇಳತೀರದು. ಸಾಲ-ಸೂಲ ಮಾಡಿ ಲಕ್ಷ ಗಟ್ಟಲೆ ಭೂಮಿಯಲ್ಲಿ ಹಣ ಖರ್ಚು ಮಾಡಿದ ರೈತರು ಇಂದು ಕಂಗಾಲಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲವು ಗ್ರಾಮಗಳಲ್ಲಿ ದ್ರಾಕ್ಷಿ ಬೆಳೆಗಾರರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಕಾಗವಾಡ ವ್ಯಾಪ್ತಿಯ ಸಂಬರಗಿ ಗ್ರಾಮದ ವಿಠ್ಠಲ್ ಭಾವು ಶಿಂಧೆ ಎಂಬ ರೈತ ಕಳೆದ ಎಂಟು ವರ್ಷಗಳಿಂದ ಲಕ್ಷಗಟ್ಟಲೆ ಖರ್ಚು ಮಾಡಿ ದ್ರಾಕ್ಷಿ ಬೆಳೆದರೂ ಎರಡು ಬಾರಿ ಮಾತ್ರ ಫಸಲು ಕೈಗೆಟಕಿದೆ. ಅದ್ರಲ್ಲೂ ಈ ಬಾರಿ ಬರಗಾಲದ ಛಾಯೆ ಆವರಿಸಿ ನೀರು ಇಲ್ಲದೆ ರೈತರು ಕಂಗಾಲಾಗಿದ್ದು, ದ್ರಾಕ್ಷಿ ಬೆಳೆದ ರೈತರು ಬೆಳೆ ನಾಷವಾದ ಪರಿಣಾಮ ನಷ್ಟದ ಕೊಂಡಿಗೆ ಸಿಲುಕಿ ಮತ್ತೆ ಬರ ಸಿಡಿಲು ಅಪ್ಪಳಂಸಿದಂತಾಗಿದೆ.
ವಿಜಯಪುರ ಬಿಟ್ಟರೆ ರಾಜ್ಯದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ನಾಡು ಎಂದರೆ ಅದು ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರ. ಆದರೆ. ಪ್ರಕೃತಿ ವಿಮೋಪದಿಂದ ರೋಗಭಾದೆಗೆ ತುತ್ತಾಗಿ ನೂರಾರು ಎಕರೆ ದ್ರಾಕ್ಷಿ ನಾಶವಾಗಿವೆ. ರಾಜ್ಯ ಸರ್ಕಾರ ಬರ ನಿರ್ವಹಣೆ ಜೊತೆಗೆ ದ್ರಾಕ್ಷಿ ಬೆಳೆಗಾರರಿಗೂ ಸೂಕ್ತ ಪರಿಹಾರ ನೀಡುವಂತೆ ರೈತ ಮುಖಂಡ ಮಹಾದೇವ ಮಡಿವಾಳ ಆಗ್ರಹಿಸಿದ್ದಾರೆ.