Wednesday, January 22, 2025

Bigg Boss Kannada: ಬಿಗ್​ ಬಾಸ್ ಮಿಡ್‌ ವೀಕ್‌ ಎಲಿಮಿನೇಶನ್​​​​​​; ದೊಡ್ಮನೆಯಿಂದ ಬೆಂಕಿ ತನಿಷಾ ಔಟ್‌

ಬೆಂಗಳೂರು: ಬಿಗ್ ಬಾಸ್​ ಮನೆಯಲ್ಲಿ ಆಟ ಟ್ವಿಸ್ಟ್ ಮೇಲೆ ಟ್ವಿಸ್ಟ್ ತೆಗೆದುಕೊಳ್ತಿದೆ. ಬಂದ ಅತಿಥಿಗಳೆಲ್ಲಾ ಹೊರಗೆ ಹೋದ ಬಳಿಕ ಬಿಗ್​ ಬಾಸ್​ ಎಲಿಮಿನೇಷನ್ ಶಾಕ್ ಕೊಟ್ಟಿದ್ದಾರೆ.

ಹೌದು, ಬಿಗ್‌ಬಾಸ್‌ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದೆ.‘ಬಿಗ್‌ಬಾಸ್‌ ಸೂಚಿಸಿದ್ದ ಸದಸ್ಯರು ಈ ಕೂಡಲೇ ಮುಖ್ಯಧ್ವಾರದಿಂದ ಹೊರಬರಬೇಕು’ ಹೀಗೆ ಬಿಗ್‌ಬಾಸ್ ಧ್ವನಿ ಮನೆಯೊಳಗೆ ಮೊಳಗುತ್ತಿದ್ದ ಹಾಗೆ ಸ್ಪರ್ದಿಗಳ ಮುಖದಲ್ಲಿ ಆತಂಕದ ಕಾರ್ಮೋಡ ಕವಿದಿದೆ.

ಕಳೆದ ವಾರಾಂತ್ಯದಲ್ಲಿ ಹೋಲ್ಡ್‌ನಲ್ಲಿ ಇರಿಸಿದ್ದ ಎಲಿಮಿನೇಷನ್‌ ಪ್ರಕ್ರಿಯೆಗೆ ಈಗ ಇದ್ದಕ್ಕಿದ್ದಂತೆಯೇ ಬಿಗ್‌ಬಾಸ್‌ ಚಾಲನೆ ಕೊಟ್ಟಿದ್ದಾರೆ. ಈ ಹಂತದಲ್ಲಿ ಮನೆಯಿಂದ ಹೊರಹೋಗುತ್ತಿರುವ ಸ್ಪರ್ಧಿ ಯಾರು ಎಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

ಬಿಗ್‌ಬಾಸ್‌ ‘ತನಿಷಾ ಈ ಮನೆಯಲ್ಲಿ ನಿಮ್ಮ ಪಯಣ ಇಲ್ಲಿಗೆ ಮುಕ್ತಾಯವಾಗುತ್ತದೆ’ ಎಂಬ ಮಾತಿನೊಂದಿಗೆ ಮಿಡ್‌ವೀಕ್ ಎಲಿಮಿನೇಷನ್‌ ಸ್ಪೋಟಗೊಂಡಿದೆ. ತನಿಷಾ ಕುಪ್ಪಂಡ ಮನೆಯಿಂದ ಹೊರಬೀಳುತ್ತಿದ್ದಾರೆ.ಹಾಗಾದರೆ ಇವೆಲ್ಲವೂ ನಡೆದಿದ್ದು ಹೇಗೆ? ಮನೆಯ ಸದಸ್ಯರ ಪ್ರತಿಕ್ರಿಯೆ ಹೇಗಿತ್ತು? ಈ ಎಲ್ಲವನ್ನೂ ಈವತ್ತಿನ ಎಪಿಸೋಡಿನಲ್ಲಿ ವೀಕ್ಷಿಸಬಹುದು.

 

RELATED ARTICLES

Related Articles

TRENDING ARTICLES