Saturday, December 21, 2024

ಮೃತ ಅಭಿಮಾನಿಗಳ ಕುಟುಂಬಕ್ಕೆ ಪರಿಹಾರ ಚೆಕ್​ ತಲುಪಿಸಿದ ಯಶ್​!

ಗದಗ: ಯಶ್​ ಜನ್ಮದಿನಕ್ಕೆ ಬ್ಯಾನರ್​ ಕಟ್ಟುವ ವೇಳೆ ಅಭಿಮಾನಿಗಳು ವಿದ್ಯುತ್​ ಅವಘಡ ಸಂಭವಿಸಿ ಸಾವಿಗೀಡಾಗಿದ್ದರು, ಈ ಪ್ರಕರಣದಲ್ಲಿ ಮೃತ ಅಭಿಮಾನಿಗಳ ಕುಟುಂಬಗಳಿಗೆ ನಟ ಯಶ್​ ಪರಿಹಾರದ ಚೆಕ್​ ವಿತರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಭಿಮಾನಿಗಳ ನಿಧನದ ಬಳಿಕ ಯಶ್​ ಅವರು ಮೃತರ ಮನೆಗಳಿಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಈ ವೇಳೆ ಅವರಿಗೆ ಪರಿಹಾರ ಹಣದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ತಮ್ಮ ಕೈಲಾದ ಸಹಾಯ ಮಾಡುವುದಾಗಿ ಯಶ್​ ತಿಳಿಸಿದ್ದರು. ಈಗ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೀಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಅಯೋಧ್ಯೆ: ರಾಮ ಲಲ್ಲಾ ಪ್ರತಿಷ್ಠಾಪನೆ ನಿಷೇಧಿಸುವಂತೆ ಕೋರಿ ಕೊರ್ಟ್​ಗೆ ಅರ್ಜಿ!

ನಟ ಅವರ ಜನ್ಮದಿನದ ಹಿನ್ನಲೆಯಲ್ಲಿ ಬ್ಯಾನರ್​ ಕಟ್ಟುವಾಗ ವಿದ್ಯುತ್​ ತಂತಿ ಸ್ಪರ್ಶಿಸಿ ಅಭಿಮಾನಿಗಳು ನಿಧನರಾದ ನೋವು ಇನ್ನೂ ಹಸಿಯಾಗಿದೆ. ಮೃತ ಅಭಿಮಾನಿಗಳಾದ ಮುರಳಿ, ನವೀನ್​ ಮತ್ತು ಹನುಮಂತ ಅವರ ಕುಟುಂಬದವರಿಗೆ ಪರಿಹಾರ ಹಣ ತಲುಪಿಸಲಾಗಿದೆ.

ಇದೀಗ, ಯಶ್​ ಆಪ್ತರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿ ಪರಿಹಾರದ ಚೆಕ್​ ನೀಡಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಚೆಕ್​ ನೀಡಲಾಗಿದೆ. ಯಶ್​ ಸ್ನೇಹಿತರು ಬಂದು ಪರಿಹಾರ ಹಣ ನೀಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ನೋವು ಪೋಷಕರನ್ನು ಕಾಡುತ್ತಿದೆ.

RELATED ARTICLES

Related Articles

TRENDING ARTICLES