ಮೈಸೂರು: ತಮ್ಮ ತಂದೆಯೇ ಐದು ವರ್ಷ ಸಿಎಂ ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಬಗ್ಗೆ ನನಗೆ ಪಾಪಾ ಅನ್ನಿಸುತ್ತದೆ. ಎಸ್.ಎಂ ಕೃಷ್ಣ ನಂತರ ಮತ್ತೊಮ್ಮೆ ಅವಕಾಶ ಬಂದಿದೆ ಅಂತಾ ಡಿಕೆಶಿ ಚುನಾವಣೆಗೆ ಮುನ್ನ ಒಕ್ಕಲಿಗರಿಗೆ ಹೇಳುತ್ತಿದ್ದರು. ಡಿಕೆಶಿ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಹಾಗೂ ಬಂಡವಾಳ ಹಾಕಿದ್ದರು. ಅಧಿಕಾರ ಬಂದ್ಮೇಲೆ ಸಿದ್ದರಾಮಯ್ಯ ಹಠ ಹಿಡಿದು ಮೊದಲ ಅವಧಿಗೆ ಸಿಎಂ ಆದರು. ಸಿಎಂ ಕುರ್ಚಿಯಲ್ಲಿ ಕೂತ ಕೂಡಲೇ ಪೂರ್ಣಾವಧಿ ಸಿಎಂ ಆಗುವ ಪ್ಲಾನ್ ಮಾಡಿದ್ದಾರೆ.
ಇದನ್ನೂ ಓದಿ: ಮೃತ ಅಭಿಮಾನಿಗಳ ಕುಟುಂಬಕ್ಕೆ ಪರಿಹಾರ ಚೆಕ್ ತಲುಪಿಸಿದ ಯಶ್!
ಎಂ.ಬಿ. ಪಾಟೀಲ್, ಸತೀಶ್ ಜಾರಕಿ ಹೊಳಿ, ರಾಜಣ್ಣ ಮೂಲಕ ಮೊದಲ ಸಿಎಂ ಹೇಳಿಕೆ ಕೊಡಿಸಿದ್ದರು. ಈಗ ಮಗನ ಕೈಯಲ್ಲಿ ಪೂರ್ಣಾವಧಿ ಸಿಎಂ ಅಂತಾ ಹೇಳಿಕೆ ಕೊಡಿಸಿದ್ದಾರೆ. ಈ ಮೂಲಕ ಮಗನ ಮೂಲಕ ಡಿಕೆಶಿಗೆ ಸಂದೇಶ ರವಾನಿಸಿದ್ದಾರೆ. ಸ್ವಜಾತಿ ಅವರು ಮುಸ್ಲಿಮರು ತಮ್ಮ ತಂದೆಯ ಕೈಹಿಡಿದರು ಎಂದು ಯತೀಂದ್ರ ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆ ಮತಹಾಕಿದ್ದು ಒಕ್ಕಲಿಗರು ಅಲ್ವಾ? ವರುಣಾದಲ್ಲಿ ಲಿಂಗಾಯತರು ತಾನೇ? ನಿಮಗೆ ಮತ ಹಾಕಿದ್ದು. ಡಿಕೆಶಿಯ ಎದೆಗೆ ಸಿದ್ದರಾಮಯ್ಯ ಮಗ ಹೆಗಲ ಮೇಲೆ ಗನ್ ಇಟ್ಟು ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ರು.