Saturday, December 28, 2024

ರೋಹಿತ್ ಆರ್ಭಟ.. ಐತಿಹಾಸಿಕ ಶತಕಕ್ಕೆ ದಾಖಲೆಗಳು ಉಡೀಸ್..!

ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧದ ಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಕ್ಷರಶಃ ಅಬ್ಬರಿ ಬೊಬ್ಬಿರಿದರು. ಕೇವಲ 64 ಎಸೆತಗಳಲ್ಲಿ ರೋಹಿತ್ ಶರ್ಮಾ ಐತಿಹಾಸಿಕ ಶತಕ ಪೂರೈಸಿದರು. ಇದು ರೋಹಿತ್ ಶರ್ಮಾ ಅವರ 5ನೇ ಅಂತರಾಷ್ಟ್ರೀಯ ಟಿ-20 ಶತಕವಾಗಿದೆ.

ರೋಹಿತ್​ಗೂ ಮೊದಲು ಯಾವುದೇ ಬ್ಯಾಟ್ಸ್‌ಮನ್‌ಗಳು ಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 5 ಶತಕಗಳನ್ನು ಸಿಡಿಸಿರಲಿಲ್ಲ. ಇದೀಗ ದಾಖಲೆಯ 5ನೇ ಶತಕ ಸಿಡಿಸಿರುವ ರೋಹಿತ್ ಶರ್ಮಾ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 69 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 11 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳೊಂದಿಗೆ ಅಜೇಯ 121* ರನ್ ಚಚ್ಚಿದರು.

ರಿಂಕು ತೂಫಾನ್ ಬ್ಯಾಟಿಂಗ್

ಒಂದೆಡೆ ರೋಹಿತ್ ಅಫ್ಘಾನ್​ ಬೌಲರ್​ಗಳನ್ನು ದಂಡಿಸುತ್ತಿದ್ದರೆ, ಮತ್ತೊಂದೆಡೆ ಸೂಪರ್ ಸ್ಟಾರ್ ರಿಂಕು ಸಿಂಗ್ ಶರ್ಮಾ​ಗೆ ಉತ್ತಮ ಸಾಥ್ ನೀಡಿದರು. ರಿಂಕು ಸಿಂಗ್ ಕೂಡ ಕೇವಲ 39 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಅಮೋಘ ಸಿಕ್ಸರ್ ಸಹಿತ ಅಜೇಯ 69* ರನ್ ಸಿಡಿಸಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿತು.

ಟಿ-20 ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು

  • ರೋಹಿತ್ ಶರ್ಮಾ : 5
  • ಸೂರ್ಯಕುಮಾರ್ ಯಾದವ್ : 4
  • ಗ್ಲೆನ್ ಮ್ಯಾಕ್ಸ್‌ವೆಲ್ : 4

RELATED ARTICLES

Related Articles

TRENDING ARTICLES