Tuesday, January 21, 2025

ನಾಳೆಯಿಂದ ಲಾಲ್‌ಬಾಗ್​​​ನಲ್ಲಿ ಫಲಪುಪ್ಪ ಪ್ರದರ್ಶನ!

ಬೆಂಗಳೂರು: ನಾಳೆಯಿಂದ ಲಾಲ್‌ಬಾಗ್​​​ನಲ್ಲಿ 215ನೇ ಫಲಪುಪ್ಪ ಪ್ರದರ್ಶನ ಆರಂಭವಾಗಲಿದ್ದು ಜ.18 ರಿಂದ ಜ.28 ರ ವರೆಗೆ ನಡೆಯಲಿದೆ.

ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯು ತೋಟಗಾರಿಕೆ ಇಲಾಖೆಯಿಂದ ಸಸ್ಯಕಾಶಿ ಲಾಲ್ ಬಾಗ್‌ನ ಗಾಜಿನ ಮನೆಯಲ್ಲಿ “ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ 215 ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಿದ್ದು, ಜ.18ರಿಂದ 28ರವರೆಗೆ ಒಟ್ಟು 11ದಿನಗಳ ಕಾಲ ನಡೆಯಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಭಾರತ-ಅಫ್ಘಾನಿಸ್ತಾನ್ ಪಂದ್ಯ!

ಇಂಡೋ-ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯು ಎಕ್ಸಾಟಿಕ್ ಆರ್ಕಿಡ್ಸ್ ಗಳಾದ ಪೆಲನಾಪ್ಪಿಸ್, ಡೆಂಡೋಬಿಯಂ, ವಾಂಡಾ, ಮೊಕಾರಾ ಸೇರಿದಂತೆ 20 ಬಗೆಯ ಆಕರ್ಷಕ ಮಿನಿಯೇಚರ್ ಆಂಥೋರಿಯಂ ಹಾಗೂ ವಿವಿಧ ಬಗೆಯ ಎಕ್ಸಾಟಿಕ್ ಹೂವುಗಳಿಂದ ಕಲಾಕೃತಿಗಳನ್ನು ಅಲಂಕರಿಸಲಾಗಿದ್ದು, ವಿಶ್ವಗುರು ಬಸವಣ್ಣ ಅವರ ಪುತ್ಥಳಿಯು ಗಾಜಿನಮನೆಯ ಪ್ರವೇಶದ್ವಾರದಲ್ಲಿ ನಿಮ್ಮನ್ನು ಸ್ವಾಗತಿಸುತ್ತದೆ.

ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಕವಾಗಿರುವ ಅನುಭವ ಮಂಟಪದ ಪ್ರತಿರೂಪವು ಗಾಜಿನ ಮನೆಯ ಕೇಂದ್ರಭಾಗದಲ್ಲಿ ತಲೆ ಎತ್ತಲಿದೆ.

RELATED ARTICLES

Related Articles

TRENDING ARTICLES