Monday, December 23, 2024

ಆಂಧ್ರ ಕಾಂಗ್ರೆಸ್​ ನ ನೂತನ ಅಧ್ಯಕ್ಷೆಯಾಗಿ ವೈ.ಎಸ್​ ಜಗನ್​ ಸಹೋದರಿ ಶರ್ಮಿಳಾ ಆಯ್ಕೆ!

ಆಂಧ್ರ ಪ್ರದೇಶದ ಕಾಂಗ್ರೆಸ್​ ಪಕ್ಷದ ನೂತನ ಅಧ್ಯಕ್ಷೆಯಾಗಿ ಮಾಜಿ ಸಿಎಂ ವೈ ಎಸ್​ ರಾಜಶೇಖರ್ ರೆಡ್ಡಿ ಪುತ್ರಿ ಹಾಗು ಹಾಲಿ ಸಿಎಂ ಜಗನ್ ಮೋಹನ್​ ರೆಡ್ಡಿ ಸಹೋದರಿ ವೈ.ಎಸ್​ ಶರ್ಮಿಳಾ ರೆಡ್ಡಿಯವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಕಾಂಗ್ರೆಸ್ ಪಕ್ಷದ ಜೊತೆಗೆ ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ವಿಲೀನ ಮಾಡಿದ ವೈ. ಎಸ್. ಶರ್ಮಿಳಾ ರೆಡ್ಡಿ ಅವರನ್ನು ಆಂಧ್ರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಜನವರಿ 4 ರಂದು ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಜೊತೆ ವಿಲೀನ ಮಾಡಿದ ಶರ್ಮಿಳಾ ರೆಡ್ಡಿ, ಕೆಲವೇ ದಿನಗಳಲ್ಲಿ ಆಂಧ್ರ ಪ್ರದೇಶ ರಾಜ್ಯದ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ.

ಇದನ್ನೂ ಓದಿ: ಘಾಟಿ ಬ್ರಹ್ಮರಥೋತ್ಸವದಲ್ಲಿ ಭಾರೀ ಅವಘಡ: ಭಕ್ತನ ಮೇಲೆ ಹರಿದ KSRTC ಬಸ್​

2019ರಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಆಂಧ್ರದಲ್ಲಿ ಭಾರೀ ಬಹುಮತ ಸಾಧಿಸಿತ್ತು. 2024ರಲ್ಲಿ ಲೋಕಸಭಾ ಚುನಾವಣೆ ಜೊತೆಯಲ್ಲೇ ಆಂಧ್ರ ಪ್ರದೇಶದಲ್ಲೂ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಸಿಎಂ ಜಗನ್ ಅವರಿಗೆ ಅವರ ತಂಗಿ ಶರ್ಮಿಳಾ ಭರ್ಜರಿ ಟಕ್ಕರ್ ಕೊಡುವ ಸಾಧ್ಯತೆ ಇದೆ. ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಶರ್ಮಿಳಾ ರೆಡ್ಡಿ ಅವರಿಗೆ ಸಿಕ್ಕಿರೋದು ಭಾರೀ ಸಂಚಲನ ಸೃಷ್ಟಿಸಿದೆ.

ಆಂಧ್ರ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಗಿಡುಗು ರುದ್ರರಾಜು ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರನ್ನಾಗಿ ಪಕ್ಷ ನೇಮಕ ಮಾಡಿದ್ದು. ಈ ಮೂಲಕ ರಾಜು ಅವರನ್ನು ಸಮಾಧಾನ ಮಾಡುವ ಯತ್ನ ಮಾಡಿದೆ.

RELATED ARTICLES

Related Articles

TRENDING ARTICLES