Sunday, January 12, 2025

ಲಾರಿ ಪಲ್ಟಿ, ಡೀಸೆಲ್ ತುಂಬಿಕೊಳ್ಳಲು ಮುಗಿಬಿದ್ದ ಜನ

ತುಮಕೂರು : ಲಾರಿ ಪಲ್ಟಿಯಾಗಿದ್ರು ಗಮನಿಸದೇ ಸೋರಿಕೆಯಾದ ಡೀಸೆಲ್​​ಗೆ ಜನರು ಮುಗಿಬಿದ್ದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಾಲುಕುರಿಕೆ ಗ್ರಾಮದಲ್ಲಿ ನಡೆದಿದೆ.

ಅತಿವೇಗವಾಗಿ ಬಂದ ಹಿನ್ನೆಲೆ ಡೀಸೆಲ್ ಲಾರಿ ಪಲ್ಟಿಯಾಗಿದೆ. ಲಾರಿ ಪಲ್ಟಿಯಾಗಿದ್ರು ಪೆಟ್ಟು ಬಿದ್ದವರನ್ನು ನೋಡದೇ ಡಿಸೇಲ್​​ಗೆ ಮುಗಿಬಿದ್ದಿದ್ದಾರೆ. ತರಾತುರಿಯಲ್ಲಿ ಡ್ರಮ್​​ಗಳಲ್ಲಿ ಜನರು ಡಿಸೇಲ್ ತುಂಬಿಕೊಂಡಿದ್ದಾರೆ.

ಲಾರಿ ಪಲ್ಟಿ ವೇಳೆ ಬೈಕ್​​ನಲ್ಲಿದ್ದ ಸರ್ವಮಂಗಳ ಎನ್ನುವವರಿಗೆ ಗಂಭೀರ ಗಾಯವಾಗಿದೆ. ಸರ್ವಮಂಗಳ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದೆ. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES