Tuesday, December 24, 2024

‘ಪೂಜಿಸಲೆಂದೇ ಹೂಗಳ ತಂದೆ’ ಹಾಡಿಗೆ ಪ್ರಧಾನಿ ಮೋದಿ ಮೆಚ್ಚುಗೆ

ಬೆಂಗಳೂರು: ‘ಪೂಜಿಸಲೆಂದೇ ಹೂಗಳ ತಂದೆ…’ಎಂಬ ಕನ್ನಡ ಹಾಡಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ಹಾಡಿರುವ, ‘ಪೂಜಿಸಲೆಂದೇ ಹೂಗಳ ತಂದೆ…’ ಹಾಡಿನ ಲಿಂಕ್ ಅನ್ನು ಮೋದಿ ಅವರು ಹಂಚಿಕೊಂಡಿದ್ದಾರೆ.

‘ಕನ್ನಡದಲ್ಲಿ ಶಿವಶ್ರೀ ಸ್ಕಂದ ಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.

 

‘ನನಗೆ ಇದು ತುಂಬಾ ಸಂತೋಷದ ಕ್ಷಣ. ನಾನು ಈಗ ಅನುಭವಿಸುತ್ತಿರುವ ಭಾವನೆಯನ್ನು ವಿವರಿಸಲು ಪದಗಳು ಸಾಲುತ್ತಿಲ್ಲ. ಇದು ಸ್ವತಃ ಶ್ರೀರಾಮನ ಆಶೀರ್ವಾದ…’ಎಂದು ಶಿವಶ್ರೀ ಪ್ರತಿಕ್ರಿಯಿಸಿದ್ದಾರೆ.

ಪೂಜಿಸಲೆಂದೇ ಹೂಗಳ ತಂದೆ; ಎರಡು ಕನಸು ಸಿನ್ಮಾ ಹಾಡು

ಪೂಜಿಸಲೆಂದೇ ಹೂಗಳ ತಂದೆ ಹಾಡು ಕೇಳಿದ ಕೂಡಲೇ ನೆನಪಾಗುವುದು, ಕನ್ನಡದ ಮಿನುಗು ತಾರೆ ಕಲ್ಪನಾ ಮತ್ತು ವರ ನಟ ಡಾ.ರಾಜ್ ಕುಮಾರ್ ನಟನೆಯ ಎರಡು ಕನಸು ಸಿನಿಮಾ. ದೊರೈ-ಭಗವಾನ್ ನಿರ್ದೇಶನದ ಚಿತ್ರ ಇದು. 1974 ರಲ್ಲಿ ತೆರೆ ಕಂಡ ಸಿನಿಮಾ ಇದಾಗಿದ್ದು, ಚಿ. ಉದಯಶಂಕರ್ ಅವರು ಹಾಡಿನ ಸಾಹಿತ್ಯ ಬರೆದಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ನೀಡಿದ್ದು, ಖ್ಯಾತ ಗಾಯಕಿ ಎಸ್ ಜಾನಕಿಯವರ ಕಂಠ ಸಿರಿಯಲ್ಲಿ ಕೇಳಿಬಂದಿತ್ತು.

 

RELATED ARTICLES

Related Articles

TRENDING ARTICLES