Wednesday, January 22, 2025

ಸಂಕ್ರಾಂತಿಗೆ ಶುಭಕೋರಿದ ‘ಕಾಟೇರ’ನ ಬೆಡಗಿ : ಇಲ್ಲಿವೆ ಕ್ಯೂಟ್ ಫೋಟೋಸ್

ಬೆಂಗಳೂರು : ನಟ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿರುವ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರು ಮಕರ ಸಂಕ್ರಾಂತಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಅವರು, ‘ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ. ಮಕರ ಸಂಕ್ರಾಂತಿಯ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಚಂದನವನದ ಚೆಂದುಳ್ಳಿ ಚೆಲುವೆ, ಕೆಜಿಎಫ್‌ ಸಿನಿಮಾ ಬಳಿಕ ಖ್ಯಾತಿ ಪಡೆದಿರುವ ಶ್ರೀನಿಧಿ ಶೆಟ್ಟಿ ಅವರು ಸಹ ಸಂಕ್ರಾಂತಿ ಹಬ್ಬಕ್ಕೆ ಶುಭ ಕೋರಿದ್ದಾರೆ.

ಇಬ್ಬರೂ ನಾಯಕಿಯರು ಸಂಕ್ರಾಂತಿ ಪ್ರಯುಕ್ತ ಫೋಟೋ ಶೂಟ್​ಗೆ ಫೋಸ್​ ನೀಡಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ರೈತ ಮಹಿಳೆ ಗೆಟಪ್​ನಲ್ಲಿ ರಜನಿ

ಸಂಕ್ರಾಂತಿ ಹಬ್ಬದ ಪ್ರಯುಕ್ತ ರಂಜನಿ ರಾಘವನ್​ ಫೋಟೋಶೂಟ್​ ಮಾಡಿಸಿದ್ದಾರೆ.

ರೈತ ಮಹಿಳೆಯ ರೀತಿ ಕಾಣಿಸಿಕೊಂಡಿರುವ ಅವರು ಆ ಮೂಲಕ ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ್ದಾರೆ.

RELATED ARTICLES

Related Articles

TRENDING ARTICLES