Wednesday, January 8, 2025

ಜೀವನದಲ್ಲಿ ಧೈರ್ಯವಿರಬೇಕು, ಭಂಡತನವಿರಬಾರದು; ಡಿಸಿಎಂ ಡಿಕೆಶಿವಕುಮಾ‌ರ್

ಬೆಂಗಳೂರು: ಜೀವನದಲ್ಲಿ ಧೈರ್ಯವಿರಬೇಕು, ಭಂಡತನವಿರಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. 

ನಗರದ ಸಂಚಾರ ಪೊಲೀಸರು ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ -24 ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ಯವಕರಿಗೆ ಜೀವನದಲ್ಲಿ ಧೈರ್ಯವಿರಬೇಕು. ಆದರೆ, ಭಂಡತನ ಇರಬಾರದು. ರಸ್ತೆ ಸಂಚಾರ ನಿಯಮ ಪಾಲನೆ ಯುವ ಸಮುದಾಯ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಹೆಲ್ಮಟ್ ಧರಿಸಿ ಮೋಟಾರು ಬೈಕ್ ಚಾಲನೆ ಮಾಡದೇ ಇರುವುದು, ಫುಟ್‌ಪಾತ್ ಮೇಲೆ ಗಾಡಿ ಚಲಾಯಿಸುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕಳೆದ ವರ್ಷ ಅಧಿಕ ಸಂಖ್ಯೆಯಲ್ಲಿ ಯುವಕರೇ ಹೆಚ್ಚು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ನ್ಯಾಯ ಕೋರಿ ಠಾಣೆಗೆ ಬಂದ ಮಹಿಳೆಗೆ ಪೇದೆಯಿಂದ ಲೈಂಗಿಕ ಕಿರುಕುಳ!

ಕಳೆದ 3 ವರ್ಷಗಳಲ್ಲಿ 6 ಸಾವಿರಕ್ಕೂ ಹೆಚ್ಚು ಡ್ರೈವಿಂಗ್ ಲೈಸನ್ಸ್‌ಗಳನ್ನು ಅಮಾನತು ಮಾಡಲಾಗಿದೆ. ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ ಬೈಕ್ ಅಪಘಾತಗಳಿಂದ ಅತ್ಯಂತ ಹೆಚ್ಚು ಮರಣಗಳಾಗಿವೆ. ಆದ ಕಾರಣ ದ್ವಿಚಕ್ರ ವಾಹನ ಸವಾರರು ಹೆಲ್ಕೆಟ್ ಧರಿಸಬೇಕು ಎಂದು ತಿಳಿಸಿದರು.

 

 

 

RELATED ARTICLES

Related Articles

TRENDING ARTICLES