Wednesday, January 22, 2025

ಸಂಸದ ಅನಂತ ಕುಮಾರ್ ಹೆಗಡೆ ವಿರುದ್ದ ಸುಮೊಟೊ ಪ್ರಕರಣ ದಾಖಲು!

ಕಾರವಾರ : ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ದ ಕುಮಟಾ ಪೊಲೀಸ್​ ಠಾಣೆಯಲ್ಲಿ ಸುಮೊಟೋ ಪ್ರಕರಣ ದಖಲಿಸಲಾಗಿದೆ.

ದ್ವೇಷ ಭಾಷಣ ಹಾಗು ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನ ಮಾಡಿದ್ದಾರೆ ಎಂದು ಸೆಕ್ಷನ್ 505 ಹಾಗೂ 153ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ನ್ಯಾಯ ಕೋರಿ ಠಾಣೆಗೆ ಬಂದ ಮಹಿಳೆಗೆ ಪೇದೆಯಿಂದ ಲೈಂಗಿಕ ಕಿರುಕುಳ!

ಇತ್ತೀಚೆಗೆ ಸಂಸದ ಅನಂತಕುಮಾರ್ ಹೆಗಡೆ, ಸಿಎಂ ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲಿ ಸಂಬೋಧನೆ ಹಾಗು ಅವರ ವಿರುದ್ದ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಅಲ್ಲದೇ, ಬಾಬರಿ ಮಸೀದಿಯಂತೆ ದೇವಸ್ಥಾನಗಳ ಕುರುಹು ಇರುವ ಇತರ ಮಸೀದಿಗಳನ್ನು ಒಡೆಯುವುದಾಗಿ ಸುಳಿವು ನೀಡಿದ್ದರು. ಹಾಗು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಸಂತರ ಶಾಪದಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗಳು ರಾಜ್ಯದ ಹಲವು ಮಾದ್ಯಮಗಳಲ್ಲಿ ಪ್ರಸಾರವಾಗಿತ್ತು.

ಈ ಹೇಳಿಕೆಗಳ ವಿರುದ್ದ ಕೆರಳಿದ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಅನಂತ ಕುಮಾರ ಹೆಗಡೆ ವಿರುದ್ದ ಪ್ರಕರಣ ದಾಖಲಿಸುವಂತೆ ಒತ್ತಡ ಹೇರಿದ್ದಾರೆ. ಇದರಂತೆ ದ್ವೇಷ ಭಾಷಣ ಹಾಗು ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನ ಮಾಡಿದ್ದಾರೆ ಎಂದು ಸೆಕ್ಷನ್ 505 ಹಾಗೂ 153ಎ ಅಡಿಯಲ್ಲಿ ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES