ಬೆಳಗಾವಿ: ಬೆಳಗಾವಿಯಲ್ಲಿ ಅಂಗಡಿ ಮುಂಗಟ್ಟುಗಳಲ್ಲಿರುವ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ಬೆಳಗಾವಿ ಪಾಲಿಕೆ ಆಯುಕ್ತರು ಆದೇಶ ನೀಡಿದ್ದು, ನಾಮಫಲಕಗಳಲ್ಲಿ ಬೆಳಗಾವಿ ಎಂಬ ಪದವನ್ನೇ ಬಳಸದಲು ಖಡಕ್ ಸೂಚನೆ ನೀಡಿದ್ದಾರೆ. ಇದರೊಂದಿಗೆ ನಾಡದ್ರೋಹಿ ಎಂಇಎಸ್‌ಗೆ (MES) ಗೆ ಬೆಳಗಾವಿ ಪಾಲಿಕೆ ಆಯುಕ್ತರು ಶಾಕ್ ಕೊಟ್ಟಿದ್ದಾರೆ.
ಬೆಳಗಾವಿ ಅಂತಾ ಬಳಸಲು ಹಿಂದೇಟು ಹಾಕುತ್ತಾ ಬಂದಿದ್ದ ನಾಡದ್ರೋಹಿಗಳಿಗೆ ಇದರಿಂದ ಶಾಕ್ ಆಗಿದೆ. ಸರ್ಕಾರದ ಆದೇಶವನ್ನ ಕಟ್ಟುನಿಟ್ಟಾಗಿ ಪಾಲಿಸಲು 2 ಸಾವಿರ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ರಂಗೇರಿದ ಲೋಕಸಭಾ ಚುನಾವಣೆ ಅಖಾಡ: ಕರ್ನಾಟಕದಿಂದ ಪ್ರಿಯಾಂಕ ಗಾಂಧಿ ಸ್ಪರ್ಧೆ!
ಆದೇಶ ಪಾಲಿಸದವರ ಅಂಗಡಿ ಲೈಸನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಲಾಗಿದೆ. ಬೆಳಗಾವಿ ಮಹಾನಗರದಲ್ಲಿ ಅನೇಕ ವರ್ಷಗಳಿಂದ ಕನ್ನಡ ಹೋರಾಟಗಾರ ಒತ್ತಾಯವಿತ್ತು. ಸರ್ಕಾರದ ಆದೇಶದಂತೆ ಶೇ.60 ರಷ್ಟು ನಾಮಫಲಕದಲ್ಲಿ ಕನ್ನಡ ಬರೆಸಬೇಕು ಎಂದಿದೆ. ಕನ್ನಡಿಗರ ಬೇಡಿಕೆ ಅನುಷ್ಠಾನಕ್ಕೆ ಪಾಲಿಕೆ ಆಯಕ್ತರೇ ಫೀಲ್ಡಿಗಿಳಿದು ಕ್ರಮಕೈಗೊಂಡಿದ್ದಾರೆ.