Wednesday, January 22, 2025

ದಿನ ಭವಿಷ್ಯ: ಈ ರಾಶಿಯವರು ಅಜಾಗರೂಕರಾದರೇ ಹಣ ಕಳೆದುಕೊಳ್ಳುವ ಸಾಧ್ಯತೆ!

ಇಂದಿನ ರಾಶಿ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಶುಭ ಮತ್ತು ಲಾಭ ಇದೆ ಎಂಬುದು ಈ ವರದಿಯಲ್ಲಿದೆ.

ಮೇಷ: ಅತಿಯಾದ ಒತ್ತಡ ಕಡಿಮೆ ಮಾಡಿಕೊಳ್ಳಲು ಆಧ್ಯಾತ್ಮಿಕ ಸಾಧನೆ ಅವಶ್ಯಕವಾಗಿದೆ. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವವರ ಬಗ್ಗೆ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಮಿಶ್ರ ಫಲ.

ವೃಷಭ: ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಸಹದ್ಯೋಗಿಗಳಿಂದ ಕಿರಿಕಿರಿಯಾಗಲಿದೆ, ತಾಳ್ಮೆಯಿಂದ ವರ್ತಿಸಿ. ಕೌಟುಂಬಿಕವಾಗಿ ಮಿಶ್ರ ಫಲ.

ಮಿಥುನ: ಬಂಧುಗಳು ಟೀಕೆಗಳನ್ನು ಮಾಡುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಒತ್ತಡ ಇರಲಿದೆ, ಮಾನಸಿಕ ನೆಮ್ಮದಿ ಹಾಳು ಮಾಡುವ ಸಾಧ್ಯತೆ ಇದೆ. ಸಂಯಮದಿಂದ ವರ್ತಿಸಿ. ಆರ್ಥಿಕ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.

ಕಟಕ: ಪ್ರಮುಖ ವ್ಯಕ್ತಿಗಳ ಸಹಕಾರ ಸಿಗಲಿದೆ. ಆತುರದ ತೀರ್ಮಾನ ತೆಗೆದುಕೊಳ್ಳುವುದು ಬೇಡ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರುತ್ತದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ

ಸಿಂಹ: ಮಿತಿಮೀರಿದ ಕೆಲಸದ ಒತ್ತಡದಿಂದಾಗಿ ದಣಿವಾಗಲಿದೆ, ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಕ್ಕಳಿಂದ ಸಂತೋಷ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.

ಕನ್ಯಾ: ನಿಮ್ಮ ವರ್ತನೆ ಕುಟುಂಬದ ಸದಸ್ಯರಿಗೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಹಣಕಾಸು ಪ್ರಗತಿ ಇರಲಿದೆ. ಬಂಧುಗಳ ಭೇಟಿ ಕೊಂಚ ಸಮಾಧಾನ ತರುವುದು. ಕೌಟುಂಬಿಕವಾಗಿ ಶುಭ ಫಲ.

ತುಲಾ: ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಸಂಗಾತಿಯ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಮಾತಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.

ವೃಶ್ಚಿಕ: ಕುಟುಂಬದ ಸದಸ್ಯರ ಆರೋಗ್ಯ ಕಡೆ ಗಮನ ಇರಲಿ. ನಕಾರಾತ್ಮಕ ಆಲೋಚನೆಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುವಂತೆ ಮಾಡಬಹುದು. ದಿನದ ಮಟ್ಟಿಗೆ ಖರ್ಚು ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.

ಧನಸ್ಸು: ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಆಪ್ತ ಸ್ನೇಹಿತ- ಸಂಬಂಧಿಗಳ ಸಮಸ್ಯೆಗಳಿಗೆ ಸ್ಪಂದಿಸುವಿರಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.

ಮಕರ: ಆರೋಗ್ಯ ಉತ್ತಮವಾಗಿರಲಿದೆ. ಸ್ನೇಹಿತರ ಸಹಕಾರ ಸಿಗಲಿದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಕೆಲಸದ ನಿಧಾನಗತಿ ಸ್ವಲ್ಪ ಒತ್ತಡ ತರುವುದು. ಅತಿರೇಖದಲ್ಲಿ ಮಾತನಾಡುವುದು ಬೇಡ. ಸಮಾಧಾನದಿಂದ ವರ್ತಿಸಿ. ಕೌಟುಂಬಿಕವಾಗಿ ಮಿಶ್ರ ಫಲ.

ಕುಂಭ: ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಹಿರಿಯರ ಮಾರ್ಗದರ್ಶನ ಸಿಗುವುದು. ಆರೋಗ್ಯ ಉತ್ತಮವಾಗಿರಲಿದೆ. ಅನಿರೀಕ್ಷಿತ ಖರ್ಚಾಗಲಿದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ.

ಮೀನ: ಉದ್ಯೋಗದ ಸ್ಥಳದಲ್ಲಿ ಹೊಸ ಭರವಸೆಗಳು ಮೂಡಲಿವೆ. ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಪಾಲುದಾರಿಕೆ ವ್ಯವಹಾರವು ನಷ್ಟ ತರುವುದು. ನಿಮ್ಮ ಉದಾರ ವರ್ತನೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ.

RELATED ARTICLES

Related Articles

TRENDING ARTICLES