Wednesday, June 26, 2024

ನ್ಯಾಯ ಕೋರಿ ಠಾಣೆಗೆ ಬಂದ ಮಹಿಳೆಗೆ ಪೇದೆಯಿಂದ ಲೈಂಗಿಕ ಕಿರುಕುಳ!

ಕಲಬುರಗಿ: ಕಷ್ಟ ಎಂದು ಪೊಲೀಸ್ ಠಾಣೆಗೆ ಹೋದ ಮಹಿಳೆಗೆ ಪೇದೆಯೇ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿ ನಡೆದಿದೆ.

ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಗೆ ಕಾನ್ಸ್​ಟೇಬಲ್ ಬಸವರಾಜ ಲೈಂಗಿಕ ಕಿರುಕುಳ ನೀಡಿದ್ದಾನೆ. ಸದ್ಯ ಘಟನೆ ಸಂಬಂಧ ಕಲಬುರಗಿ ಮಹಿಳಾ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಪೇದೆಯಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಪ್ರತಿ ದಿನ ಜಗಳ, ಹೊಡೆದಾಟ, ವಿಪರಿತ ಕುಡಿತದಿಂದ ಗಂಡನ ಕಾಟಕ್ಕೆ ಬೇಸತ್ತಿದ್ದ ಮಹಿಳೆ ದೂರು ನೀಡಲು ಕಮಲಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನ್ಯಾಯಕ್ಕಾಗಿ ಪೊಲೀಸರ ಮುಂದೆ ಕೈ ಚಾಚಿದ್ದರು. ಮಹಿಳೆಯ ಅಸಹಾಯಕತೆಯನ್ನು ನೋಡಿದ ಕಾನ್ಸ್​ಟೇಬಲ್ ಬಸವರಾಜ ಆಕೆಯ ಕಣ್ಣೀರೊರೆಸುವ ನೆಪದಲ್ಲಿ ಮಹಿಳೆಯ ಪರಿಚಯ ಮಾಡಿಕೊಂಡಿದ್ದ. ಬಳಿಕ ನನ್ನ ಜೊತೆ ಒಂದು ರಾತ್ರಿ ಮಲಗು ನಿನ್ನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಮಹಿಳೆ ಬಳಿ ಹೇಳಿದ್ದ. ಅಷ್ಟೇ ಅಲ್ಲದೆ ಪ್ರತಿನಿತ್ಯ ವಾಟ್ಸಾಪ್ ಮೆಸೇಜ್ ಮಾಡಿ ಕಿರುಕುಳ‌ ನೀಡುತ್ತಿದ್ದ.

ಸದ್ಯ ಕಿರುಕುಳ ತಾಳಲಾರದೆ ಕಲಬುರಗಿ ಮಹಿಳಾ ಠಾಣೆಯಲ್ಲಿ ಕಾನ್ಸ್​ಟೇಬಲ್ ಬಸವರಾಜ ವಿರುದ್ದ ಮಹಿಳೆ ದೂರು ದಾಖಲಿಸಿದ್ದಾರೆ. ಕಮಲಾಪುರ ಠಾಣೆಯಲ್ಲಿ ಐಪಿಸಿ ಸೆ.345A ಹಾಗು 506 ಅಡಿಯಲ್ಲಿ ಕೇಸ್ ದಾಖಲಾಗಿದೆ.

RELATED ARTICLES

Related Articles

TRENDING ARTICLES