Sunday, December 22, 2024

ಕೆಲಸಕ್ಕೆ ಬಾರದಿರೋ ಹೆಚ್​ಡಿಕೆ ನಾ ಆಯ್ಕೆ ಮಾಡಿದರೇ ಪ್ರಯೋಜನ ಇಲ್ಲಾ: ಶಾಸಕ ಬಾಲಕೃಷ್ಣ

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹೆಚ್ಡಿಕೆ  ಸ್ಪರ್ಧೆ ಬಗ್ಗೆ ಚರ್ಚೆ ವಿಚಾರಕ್ಕೆ ಸಂಬಂಧಿಸಿಂತೆ ಮಾಗಡಿಯಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ಮೊದಲು ಅವರು ಅಧಿಕೃತ ಘೋಷಣೆ ಮಾಡಲಿ, ಬಳಿಕ ಆ ಬಗ್ಗೆ ನಾನು ಮಾತನಾಡ್ತೇನೆ ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಲು ಸರ್ವೆ ಮಾಡಿಸ್ತಿದ್ದಾರೆ. ಅವರು ಬೆಂಗಳೂರು ಗ್ರಾಮಾಂತರಕ್ಕೆ ಬರ್ತಿನಿ ಅಂದಾಗ ನೋಡೋಣ.

ಇದನ್ನೂ ಓದಿ: ಅಂಬಾನಿ ಏಷ್ಯಾದ ನಂ. 1 ಶ್ರೀಮಂತ, 100 ಬಿಲಿಯನ್ ಕ್ಲಬ್​ಗೆ ಸೇರ್ಪಡೆ

ಡಿ.ಕೆ.ಸುರೇಶ್ ನಂತಹ ಸಂಸದನನ್ನ ಕಳೆದುಕೊಂಡ್ರೆ ಅದು ರಾಮನಗರಕ್ಕೆ ನಷ್ಟ. ರಾಮನಗರ ಜಿಲ್ಲೆ ಅಭಿವೃದ್ಧಿಗೆ ಡಿ.ಕೆ.ಸುರೇಶ್ ಪಾತ್ರ ದೊಡ್ಡದು. ಯಾರನ್ನೋ ಕೆಲಸಕ್ಕೆ ಬಾರದವರನ್ನ ಆಯ್ಕೆ ಮಾಡಿದ್ರೆ ಪ್ರಯೋಜನ ಇಲ್ಲ. ಮೊದಲು ಮೈತ್ರಿ ಅಭ್ಯರ್ಥಿ ಯಾರು ಅಂತ ಘೋಷಣೆ ಮಾಡಿ. ಅಲ್ಲಿ ಒಬ್ಬರನ್ನೊಬ್ಬರು ಆಚೆ ತಳ್ಳೊಕೆ ನೋಡ್ತಿದ್ದಾರೆ. ಹೆಚ್ಡಿಕೆನ ಆಚೆ ತಳ್ಳಿದ್ರೆ ಚನ್ನಪಟ್ಟಣದಲ್ಲಿ ನಾನು ಪ್ರತಿಷ್ಠಾಪನೆ ಆಗಬಹುದು ಅನ್ನೊದು ಸಿಪಿವೈ ಲೆಕ್ಕಾಚಾರ. ಆದರೇ ಇಲ್ಲಿ ಯಾರೂ ಪ್ರತಿಷ್ಠಾಪನೆ ಆಗೋದೆ ಇಲ್ಲ, ಈ ಬಾರಿ ಡಿ.ಕೆ.ಸುರೇಶ್ ಗೆಲುವು ನಿಶ್ಚಿತ ಎಂದಿದ್ದಾರೆ.

RELATED ARTICLES

Related Articles

TRENDING ARTICLES