Thursday, November 21, 2024

ಸಿರಿಧಾನ್ಯಗಳ ಹಬ್ಬ ಮತ್ತು ಕಿಸಾನ್ ಮೇಳಕ್ಕೆ ಸಚಿವ ಮುನಿಯಪ್ಪ ಚಾಲನೆ

ದೇವನಹಳ್ಳಿ: ಕೃಷಿ ಇಲಾಖೆಯ ವತಿಯಿಂದ ದೇವನಹಳ್ಳಿಯ ಕ್ರೀಡಾಂಗಣ ದಲ್ಲಿ ಸಿರಿಧಾನ್ಯಗಳ ಹಬ್ಬ ಹಾಗೂ ಕಿಸಾನ್ ಮೇಳವನ್ನು ಆಯೋಜಿಸಲಾಗಿತ್ತು. ಸಿರಿಧಾನ್ಯಗಳ ಮೇಳಕ್ಕೆ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್.ಮುನಿಯಪ್ಪ ಚಾಲನೆ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿರಿಧಾನ್ಯಗಳು ಆರೋಗ್ಯಕ್ಕೆ ಉಪಯೋಗಕರವಾಗಿದ್ದು ಸಜ್ಜೆ ,ನವಣೆ ,ರಾಗಿ ಮುಂತಾದ ಆಹಾರ ಪದಾರ್ಥಗಳನ್ನು ನಮ್ಮ ರಾಷ್ಟ್ರದಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತಿದ್ದೇವೆ.  ನಮ್ಮ ರಾಜ್ಯದಲ್ಲಿ ಬಯಲು ಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ದಲ್ಲಿ ಹನಿ ನೀರಾವರಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇದ್ದೇವೆ. ನಮಗೆ ನೀರಿನ ಕೊರತೆ ಇರುವುದರಿಂದ ನಾವು ನೀರನ್ನು ಮಿತವಾಗಿ ಬಳಸುತ್ತಿದ್ದೇವೆ. ರೇಷ್ಮೆ ಯ ಉತ್ಪಾದನೆ ಯಲ್ಲಿಯೂ ನಮ್ಮ ಜಿಲ್ಲೆ ಪ್ರಮುಖವಾದ ಸ್ಥಾನ ಪಡೆದಿದೆ.

ಇದನ್ನೂ ಓದಿ: ಫೆ.4ರಂದು ಮೈಸೂರಿನಿಂದ ಅಯೋಧ್ಯೆಗೆ ಉಚಿತ ರೈಲು ಸೇವೆ!

ಸಿರಿಧಾನ್ಯಗಳ ನವಣೆ , ಸಾಮೆ, ಆರ್ಕಾ, ಸಜ್ಜೆ ನಾವು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಬೆಳೆಯುತ್ತಿದ್ದವು ಈಗ ಜನರು ಪಾಸ್ಟ್ ಪುಡ್ ಗೆ ಪ್ರಾಮುಖ್ಯತೆಯನ್ನು ಕೊಡುತ್ತಾರೆ ರಾಗಿ ತಿಂದವನಿಗೆ ರೋಗವಿಲ್ಲಾ  ಅಂದು ಅಭಿಪ್ರಾಯ ಪಟ್ಟರು. ಒಂದು ಎಕರೆಗೆ ಪ್ರೋತ್ಸಾಹ ಧನವಾಗಿ ಸಿರಿಧಾನ್ಯಗಳಿಗೆ 10ಸಾವಿರ ರೂಗಳನ್ನು ನೀಡುತ್ತಿದ್ದಾರೆ ಇನ್ನೂ ಜಾಸ್ತಿ ಕೊಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.

ಸಿರಿಧಾನ್ಯಗಳ ಇಳುವರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಧನದ ಗೊಬ್ಬರ ಬಳಸಲು ಕೃಷಿ ಇಲಾಖೆ ಹಾಗೂ ಪ್ರಾಮುಖ್ಯತೆಯನ್ನು ಕೊಡಬೇಕು. ನಾನು ಕೊಳ್ಳೇಗಾಲ ದಿಂದ ಮೊಟ್ಟೆ ತಂದು ರೇಷ್ಮೆ ಬೆಳೆಯುತ್ತಿದ್ದೆ. ಸರ್ಕಾರ ರೈತರ ಪರವಾಗಿದೆ. ಅದೇ ರೀತಿಯಾಗಿ ನಮ್ಮಲ್ಲಿ ವೈಜ್ಞಾನಿಕ ಪದ್ದತಿಯನ್ನು ಬಳಸಿಕೊಂಡು ಸಿರಿಧಾನ್ಯಗಳ ಬೆಳೆಯುವ ಕಡೆ ಗಮನವಹಿಸಬೇಕಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮ ದಲ್ಲಿ ಸಂಸದರಾದ ಬಚ್ಚೇಗೌಡ, ಚೆನ್ನಹಳ್ಳಿ ರಾಜಣ್ಣ, ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES