Wednesday, January 22, 2025

ಮಹೇಶ್​ ಬಾಬು ನಟನೆಯ ಗುಂಟೂರು ಖಾರಂ ಬಲು ಘಾಟು.. ಫ್ಯಾನ್ಸ್ ಹೇಳಿದ್ದೇನು..?

ಫಿಲ್ಮಿಡೆಸ್ಕ್​: ಪ್ರಿನ್ಸ್ ಮಹೇಶ್ ಬಾಬು ನಟನೆಯ ಟಾಲಿವುಡ್ ಮೂವಿ ಗುಂಟೂರು ಖಾರಂ ದೊಡ್ಡ ನಿರೀಕ್ಷೆಯೊಂದಿಗೆ ತೆರೆಗೆ ಬಂದಿದೆ. ತ್ರಿವಿಕ್ರಮ್- ಪ್ರಿನ್ಸ್ ಕಾಂಬಿನೇಷನ್​ನ ಈ ಸಿನಿಮಾ ನಿರೀಕ್ಷೆಯಂತೆ ಬಿಗ್ ಓಪನಿಂಗ್ ಪಡೆದುಕೊಂಡಿದೆ. ಅಭಿಮಾನಿಗಳು ಮುಗಿಬಿದ್ದು ಫಸ್ಟ್ ಡೇ ಫಸ್ಟ್ ಶೋ ಸಿನಿಮಾನ ನೋಡಿದ್ದಾರೆ. ಆದ್ರೆ ಗುಂಟೂರು ಖಾರಂ ನಿರೀಕ್ಷೆಯಂತೆ ಮೂಡಿ ಬಂದಿದೆಯಾ.. ಚಿತ್ರಕ್ಕೆ ಬಂದಿರೋ ರೆಸ್ಪಾನ್ಸ್ ಎಂಥದ್ದು ಇಲ್ಲಿದೆ ವರದಿ.

ಯೆಸ್, ದೊಡ್ಡ ನಿರೀಕ್ಷೆಯೊಂದಿಗೆ ತೆರೆಗೆ ಬಂದಿರೋ ಗುಂಟೂರು ಖಾರಂ ಸಿನಿಮಾಗೆ ನಿರೀಕ್ಷೆಯಂತೆಯೇ ದೊಡ್ಡ ಓಪನಿಂಗ್ ಸಿಕ್ಕಿದೆ. ತ್ರಿವಿಕ್ರಮ್ ನಿರ್ದೇಶನದ ಮಹೇಶ್ ಬಾಬು-ಶ್ರೀಲೀಲಾ ಜೋಡಿಯ ಈ ಸಿನಿಮಾ ರಿಲೀಸ್​ಗೂ ಮೊದಲೇ ದೊಡ್ಡ ಹೈಪ್ ಕ್ರಿಯೇಟ್ ಮಾಡಿತ್ತು. ತೆಲಗು ರಾಜ್ಯಗಳಷ್ಟೇ ಅಲ್ಲದೇ ವರ್ಲ್ಡ್ ವೈಡ್ ಸಾವಿರಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ರಿಲೀಸ್ ಆಗಿರೋ ಗುಂಟೂರು ಖಾರಂ ಫಸ್ಟ್ ಡೇ ಬಿಗ್ ರೆಸ್ಪಾನ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಅಂದ್ರೆ ಕನ್ನಡ : ಇನ್ಫೋಸಿಸ್​ ಸುಧಾಮೂರ್ತಿ

ಮಹೇಶ್ ಬಾಬು ಜೊತೆಗೆ ಈ ಹಿಂದೆ ಅತಡು, ಖಲೇಜ ಸಿನಿಮಾಗಳನ್ನ ಮಾಡಿದ್ದ ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾ ಇದು. ಪ್ರಿನ್ಸ್-ತ್ರಿವಿಕ್ರಮ್ ಶ್ರೀನಿವಾಸ್ ಕಾಂಬೋ ಚಿತ್ರವಾದ್ದರಿಂದ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಆದರೇ ಕಥೆ ವಿಚಾರದಲ್ಲಿ ಮತ್ತದೇ ಹಳೆ ಫಾರ್ಮುಲಾಗೆ ಜೋತು ಬಿದ್ದಿರೋದು ಅಭಿಮಾನಿಗಳಿಗೆ ಕೊಂಚ ನಿರಾಸೆ ಮಾಡಿದೆ.

ಗುಂಟೂರು ಖಾರಂನಲ್ಲಿ ತಾಯಿಯಿಂದ ದೂರವಾದ ಮಗನ ಕಥೆ ಇದೆ. ತಾಯಿ ಪಾತ್ರದಲ್ಲಿ ರಮ್ಯಾ ಕೃಷ್ಣ ಇದ್ರೆ, ತಾತನ ಪಾತ್ರದಲ್ಲಿ ಪ್ರಕಾಶ್ ರೈ ಇದ್ದಾರೆ. ಮತ್ತದೇ ಫ್ಯಾಮಿಲಿ ಗಲಾಟೆ, ಸೆಂಟಿಮೆಂಟ್, ಫೈಟ್, ಡ್ಯುಯೆಟ್ ಇರೋ ಮಾಮೂಲಿ ಮಸಾಲೆ ಕಥೆ ಸಿನಿಮಾದಲ್ಲಿದೆ. ಮಹೇಶ್ ಬಾಬು ಪರ್ಫಾರ್ಮೆನ್ಸ್ ಬ್ರಿಲಿಯಂಟ್. ಆದರೇ, ಚಿತ್ರಕಥೆ ಮ್ಯೂಸಿಕ್​ನಲ್ಲಿ ಏನೂ ಹೊಸತನ ಇಲ್ಲ ಅಂತಿದಾರೆ ಫ್ಯಾನ್ಸ್.

ಗುಂಟೂರು ಖಾರಂ ಘಾಟು ಜಾಸ್ತಿ. ರುಚಿ ಇಲ್ಲ ಅಂತಿದಾರೆ ತೆಲುಗು ಚಿತ್ರಾಭಿಮಾನಿಗಳು. ಆದ್ರೆ ಶ್ರೀಲೀಲಾ ಪರ್ಫಾರ್ಮೆನ್ಸ್, ಆ ಡ್ಯಾನ್ಸ್ ಸ್ಟೆಪ್​ ಮಾತ್ರ ಅದ್ಭುತ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಅಸಲಿಗೆ ಮೊದಲು ಈ ಸಿನಿಮಾದಲ್ಲಿ ಪೂಜಾ ಹೆಗಡೆ ನಟಿಸಬೇಕಿತ್ತು. ಬಳಿಕ ಆ ಜಾಗಕ್ಕೆ ಶ್ರೀಲೀಲಾ ಬಂದಿದ್ರು. ಸಿಕ್ಕ ಅವಕಾಶವನ್ನ ಶ್ರೀಲೀಲಾ ಸಖತ್ ಆಗೇ ಬಳಸಿಕೊಂಡಿದ್ದಾರೆ.

ಒಟ್ಟಾರೆ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿರೋ ಗುಂಟೂರು ಖಾರಂ ಮಿಕ್ಸ್ಡ್ ರೆಸ್ಪಾನ್ಸ್ ಪಡೆದುಕೊಂಡಿದೆ. ಆದ್ರೆ  ಮಿಶ್ರ ಪ್ರತಿಕ್ರಿಯೆ ನಡುವೆನೂ ಮೊದಲ ದಿನದ ಅಂತ್ಯಕ್ಕೆ ಗುಂಟೂರು ಖಾರಂ ಅಂದಾಜು 70 ರಿಂದ 80 ಕೋಟಿ ಗಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಗುಂಟೂರು ಖಾರಂ ಹೇಗೆ ಪರ್ಫಾರ್ಮ್ ಮಾಡುತ್ತೆ.. ಸಂಕ್ರಾಂತಿ ರೇಸ್​​ನಲ್ಲಿ ಯಾವ ಸ್ಥಾನ ಗಳಿಸುತ್ತೆ ಕಾದುನೋಡಬೇಕು.

RELATED ARTICLES

Related Articles

TRENDING ARTICLES