Wednesday, January 22, 2025

ಹಿಂದೂಗಳಿಗೆ ರಾಮ ಒಬ್ಬನೇ ದೇವರಾ?: ಸಚಿವ ಆರ್​.ಬಿ ತಿಮ್ಮಾಪುರ!

ಹುಬ್ಬಳ್ಳಿ: ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ದೂರ ಉಳಿದಿರುವ ಕಾಂಗ್ರೆಸ್, ಹಿಂದೂಗಳಿಗೆ ರಾಮ ಒಬ್ಬನೇ ದೇವರಾ? ಎಂದು ಸಚಿವ ಆರ್​.ಬಿ ತಿಮ್ಮಾಪುರ ತಿಳಿಸಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ರಾಮ ಒಬ್ಬನೇ ದೇವರಾ? ರಾಮ ಮಂದಿರಕ್ಕೆ ಹೋದರಷ್ಟೇ ಹಿಂದೂಗಳಾ? ಕಾಳವ್ವ, ಹನುಮಂತ, ದುರ್ಗವ್ವ ದೇವರಲ್ವಾ? ಎಂದು ಪ್ರಶ್ನಿಸಿದರು.

ಇದನ್ನು ಓದಿ: ಮೂವರು ಸಾಧುಗಳ ಮೇಲೆ ಮಾರಣಾಂತಿಕ ಹಲ್ಲೆ!

ಹಳ್ಳಿಯಲ್ಲಿರುವ ದೇವರು ಬಿಜೆಪಿಯವರಿಗೆ ಕಾಣಿಸುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ರಾಮನ ಹೆಸರಿನಲ್ಲಿ ಬಿಜೆಪಿಯವರು ಚುನಾವಣೆಗೆ ಹೊರಟಿದ್ದಾರೆ ಎಂದರು. ಬಿಜೆಪಿಯವರಿಗೆ ನರೇಂದ್ರ ಮೋದಿ ಅವರೇ ದೇವರು. ಅವರಿಗೆ ಹಳ್ಳಿಗಳಲ್ಲಿರುವ ದೇವರು ಕಾಣಿಸುವುದಿಲ್ಲ ಎಂದು ಆರ್.ಬಿ. ತಿಮ್ಮಾಪುರ ಟೀಕಿಸಿದ್ದಾರೆ.

RELATED ARTICLES

Related Articles

TRENDING ARTICLES