ಕೂಡಲ ಸಂಗಮ: ರಾಜಕೀಯ ಉದ್ದೇಶದಿಂದ ಕಾರವಾರ ಸಂಸದ ಅನಂತಕುಮಾರ ಹೆಗ್ಡೆಯವರು ರಾಜ್ಯದ ಮುಖ್ಯಮಂತ್ರಿಗಳಿಗೆ ಅಶ್ಲೀಲ ಪದಗಳನ್ನು ಬಳಸಿದ್ದರೆ, ಆ ಭಾಷೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕೂಡಲಸಂಗಮ ಹೆಲಿಪ್ಯಾಡ್ ನಲ್ಲಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.
ಇದನ್ನೂ ಓದಿ: ಶರಣ ಎಂದರೆ ಜಾತಿ-ವರ್ಗ ಇಲ್ಲದ್ದು: ಸಿ.ಎಂ ಸಿದ್ದರಾಮಯ್ಯ
ಕಾರವಾರ ಸಂಸದ ಅನಂತಕುಮಾರ ಹೆಗ್ಡೆಯವರು ಅಯೋಧ್ಯೆ ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ಮುಖ್ಯಮಂತ್ರಿಗಳು ತೆರಳುತ್ತಿಲ್ಲವೆಂದು ಏಕವಚನದಲ್ಲಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇಂತಹ ಹೇಳಿಕೆಗಳು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕೇಂದ್ರದ ಮಂತ್ರಿಯಾಗಿದ್ದಾಗ, ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದ್ದ ಅನಂತ ಕುಮಾರ್ ಹೆಗ್ಡೆಯವರಿಂದ ಉತ್ತಮ ಸಂಸ್ಕೃತಿಯನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಅವರ ಭಾಷೆ ಸುಸಂಸ್ಕೃತವಾಗಿಲ್ಲ. ಈ ಭಾಷೆ ಅವರ ಘನತೆಗೆ ಕುಂದು ಬರುತ್ತದೆ ಎಂದು ತಿಳಿಸಿದರು.