Sunday, December 22, 2024

ಫೆ.4ರಂದು ಮೈಸೂರಿನಿಂದ ಅಯೋಧ್ಯೆಗೆ ಉಚಿತ ರೈಲು ಸೇವೆ!

ಮೈಸೂರು: ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಹಿನ್ನೆಲೆ ಮೈಸೂರು ಜನತೆಗೆ ಉಚಿತ ರೈಲು ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಸಂಸದ ಪ್ರತಾಪ್​ ಸಿಂಹ ತಿಳಿಸಿದ್ದಾರೆ.

ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದೆ. ಉದ್ಘಾಟನೆಯಾದ ಬಳಿಕ ರಾಜ್ಯದ ಭಕ್ತರು ಅಯೋಧ್ಯೆ ಪ್ರವಾಸಕ್ಕೆ ಅನುಕೂಲ ಮಾಡಿಕೊಡಲು ಫೆಬ್ರವರಿ 4 ರಂದು ಮೈಸೂರಿನಿಂದ ಅಯೋಧ್ಯೆಗೆ ಉಚಿತ ರೈಲು ಸಂಚರಿಸಲಿದೆ. ಈ ಕುರಿತು ಸಂಸದ ಪ್ರತಾಪ್​ ಸಿಂಹ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ: ಹೆಚ್​ ಡಿ ದೇವೇಗೌಡ

ನಾನು ಮತ್ತು ಶಾಸಕ ಶ್ರೀವತ್ಸರವರ ನೇತೃತ್ವದಲ್ಲಿ ಅನೇಕರು ತೆರಳುತ್ತಿದ್ದೇವೆ. ಮೈಸೂರಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES