Monday, December 23, 2024

ಕ್ಯಾಪ್ಟನ್‌ ಮಿಲ್ಲರ್‌ ವಿಮರ್ಶೆ: ಕ್ರಾಂತಿಕಾರಿ ಕಥೆಗೆ ಜೀವ ತುಂಬಿದ ಧನುಷ್‌; ಅತಿಥಿ ಪಾತ್ರದಲ್ಲಿ ಅಬ್ಬರಿಸಿದ ಶಿವಣ್ಣ

ಫಿಲ್ಮಿ ಡೆಸ್ಕ್​: ಸಂಕ್ರಾಂತಿ ಪ್ರಯುಕ್ತ ಈ ವಾರ ತೆರೆಗೆ ಬಂದಿರೋ ಮತ್ತೊಂದು ಬಿಗ್ ಸಿನಿಮಾ ಕ್ಯಾಪ್ಟನ್ ಮಿಲ್ಲರ್. ಧನುಷ್ ನಟನೆಯ ಈ ಪ್ಯಾನ್ ಇಂಡಿಯಾ ವಿಶ್ವದಾದ್ಯಂತ ತೆರೆಗೆ ಬಂದಿದ್ದು ಬಿಗ್ ಓಪನಿಂಗ್ ಪಡೆದುಕೊಂಡಿದೆ. ಜೈಲರ್ ಬಳಿಕ ಶಿವರಾಜ್​ಕುಮಾರ್ ಈ ಕಾಲಿವುಡ್ ಸಿನಿಮಾದಲ್ಲಿ ನಟಿಸಿದ್ದು ಕನ್ನಡದಲ್ಲೂ ಚಿತ್ರ ತೆರೆಗೆ ಬಂದಿದೆ. ಹಾಗಾದ್ರೆ ಕ್ಯಾಪ್ಟನ್ ಮಿಲ್ಲರ್​ನಲ್ಲಿ ಶಿವತಾಂಡವ ಹೇಗಿದೆ ಅನ್ನೋ ವರದಿ ಇಲ್ಲಿದೆ.

ಯೆಸ್, ಸಂಕ್ರಾತಿ ಪ್ರಯುಕ್ತ ಬೇರೆ ಬೇರೆ ಭಾಷೆಗಳಲ್ಲಿ ಸಾಕಷ್ಟು ಬಿಗ್ ಸಿನಿಮಾಗಳು ತೆರೆಗೆ ಬಂದಿವೆ. ಆದ್ರೆ ಸ್ಯಾಂಡಲ್​ವುಡ್ ನಲ್ಲಿ ಈ ಬಾರಿ ಸಂಕ್ರಾಂತಿ ಸಪ್ಪೆ ಸಪ್ಪೆ. ಯಾಕಂದ್ರೆ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬಂದಿಲ್ಲ. ಆದ್ರೆ ಇದ್ದುದ್ದರಲ್ಲಿ ಕನ್ನಡ ಸಿನಿಪ್ರಿಯರು ಸಮಾಧಾನ ಪಟ್ಟು ಕೊಳ್ಳೋ ಸಂಗತಿ ಅಂದ್ರೆ ಶಿವರಾಜ್​ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿರೋ ಕಾಲಿವುಡ್ ಸಿನಿಮಾ ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗಿದೆ.

ಪ್ಯಾನ್ ಇಂಡಿಯಾ ಚಿತ್ರವಾಗಿರೋ ಕ್ಯಾಪ್ಟನ್ ಮಿಲ್ಲರ್ ಕನ್ನಡದಲ್ಲೂ ತೆರೆಗೆ ಬಂದಿದೆ. ಜೈಲರ್ ಬಳಿಕ ಮತ್ತೊಮ್ಮೆ ಶಿವಣ್ಣ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಮಿಂಚಿದ್ದು ಧನುಷ್ ಸೋದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲಾರ್ಧದಲ್ಲಿ ಕೆಲವೇ ನಿಮಿಷ ಬಂದ್ರೂ ಶಿವಣ್ಣ ಮಿಂಚು ಹರಿಸ್ತಾರೆ.

ಇದನ್ನೂ ಓದಿ: ಮಹೇಶ್​ ಬಾಬು ನಟನೆಯ ಗುಂಟೂರು ಖಾರಂ ಬಲು ಘಾಟು.. ಫ್ಯಾನ್ಸ್ ಹೇಳಿದ್ದೇನು..?

ಇನ್ನೂ ದ್ವಿತಿಯಾರ್ಧದಲ್ಲಿ ಬರುವ ‘ಕರಿಘಟ್ಟದ ಬೆಟ್ಟದ ಮೇಲೆ ಈರಪ್ಪ’ ಸಾಂಗ್​ನಲ್ಲಿ ಶಿವಣ್ಣ ಮಸ್ತ್ ಆಗಿ ಸ್ಟೆಪ್ ಹಾಕಿದ್ದು ಪ್ರೇಕ್ಷಕರನ್ನೂ ಉತ್ಸಾಹದಿಂದ ಕುಣಿಯುವಂತೆ ಮಾಡ್ತಾರೆ. ಇನ್ನೂ, ಕ್ಲೈಮ್ಯಾಕ್ಸ್​​ ಫೈಟ್​​ನಲ್ಲಿ ಎಂಟ್ರಿ ಕೊಟ್ಟು ಚಿತ್ರಕ್ಕೆ ತಿರುವು ಕೊಡ್ತಾರೆ. ಒಟ್ಟಾರೆ ಶಿವಣ್ಣನ ಫ್ಯಾನ್ಸ್​ಗಂತೂ ಕ್ಯಾಪ್ಟನ್ ಮಿಲ್ಲರ್ ಮೋಸ ಮಾಡಲ್ಲ.

ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಕಥೆ ಏನು ಅಂತ ನೋಡಹೋದ್ರೆ,  ಅದೊಂದು ಬುಡಕಟ್ಟು ಜನಾಂಗ. ದೇವಾಲಯದ ಪಕ್ಕದಲ್ಲೇ ಇದ್ದರೂ ಸಹ ದೇವಸ್ತಾನದ ಒಳಗೆ ಅವರು ಕಾಲಿಡುವ ಹಾಗಿಲ್ಲ. ಈ ಬುಡಕಟ್ಟು ಜನಾಂಗದ ಯುವಕ ಬ್ರಿಟಿಷ್ ಸೈನ್ಯಕ್ಕೆ ಸೇರುತ್ತಾನೆ. ಬ್ರಿಟಿಷರು ಒಮ್ಮೆ 300ಕ್ಕೂ ಹೆಚ್ಚು ಸ್ವತಂತ್ರ ಹೋರಾಟಗಾರರ ಮಾರಣಹೋಮ ನಡೆಸುತ್ತಾರೆ. ಅದನ್ನ ಕಂಡು ಆ ಯುವಕ,  ತಾನು ಬ್ರಿಟಿಷ್ ಸೈನ್ಯದಲ್ಲಿ ಕೆಲಸ ಮಾಡ್ತಾ , ನಮ್ಮವರನ್ನೇ ಏಕೆ ಬಲಿ ತೆಗೆದುಕೊಳ್ಳಬೇಕು ಅಂತ  ತನ್ನ ತಪ್ಪಿನ ಅರಿವಾಗಿ, ಬ್ರಿಟಿಷ್ ಸೈನ್ಯಕ್ಕೆ ಗುಡ್ ಬೈ ಹೇಳ್ತಾನೆ. ಬಳಿಕ ಅವರ ವಿರುದ್ಧನೇ ತಿರುಗಿ ಬಿದ್ದು ಸ್ವತಂತ್ರ ಹೋರಾಟಕ್ಕೆ ಇಳೀತಾನೆ. ಮುಂದೇನು ಅನ್ನೋದೆ ಇಡೀ ಸಿನಿಮಾ ಕಥೆ.

ಪಿರಿಯಡ್ ಆಕ್ಷನ್ ಡ್ರಾಮಾ ಚಿತ್ರವಾಗಿರೋ ಕ್ಯಾಪ್ಟನ್ ಮಿಲ್ಲರ್ ಮೇಕಿಂಗ್ ಅದ್ಭುತವಾಗಿದೆ. ಆ್ಯಕ್ಷನ್ ದೃಶ್ಯಗಳು ಅಮೋಘವಾಗಿ ಮೂಡಿಬಂದಿವೆ. ಧನುಷ್ ಅಂತೂ ಅಸುರನ್, ಕರ್ಣನ್, ಬಳಿಕ ಮತ್ತೊಮ್ಮೆ ಅದ್ಭುತ ಪರ್ಫಾರ್ಮೆನ್ಸ್​ ನೀಡಿದ್ದಾರೆ. ಚಿತ್ರ ನೋಡುಗರಿಗೆ ಒಂದು ವಿಶಿಷ್ಟ ಅನುಭವ ನೀಡುತ್ತೆ.

ಸ್ವತಂತ್ರ ಪೂರ್ವದ ಕಥೆಯನ್ನ ನಿರ್ದೇಶಕ ಅರುಣ್ ಮಹೇಶ್ವರನ್ ರೋಚಕವಾಗಿ ತೆರೆ ಮೇಲೆ ತಂದಿದ್ದು ಚಿತ್ರಕ್ಕೆ ಬಿಗ್ ಓಪನಿಂಗ್ ಸಿಕ್ಕಿದೆ. ತಮಿಳಿನ ಜೊತೆಗೆ ಅನ್ಯಭಾಷೆಗಳಲ್ಲೂ ಕ್ಯಾಪ್ಟನ್ ಮಿಲ್ಲರ್​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕ್ಯಾಪ್ಟನ್ ಮಿಲ್ಲರ್ ಕನ್ನಡ ವರ್ಷನ್ ಕೂಡ ಒಳ್ಳೆ ಓಪನಿಂಗ್ ಪಡೆದಿದ್ದು ಶಿವಣ್ಣನ ಫ್ಯಾನ್ಸ್ ಕೂಡ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

RELATED ARTICLES

Related Articles

TRENDING ARTICLES