Monday, December 23, 2024

ಬ್ರ್ಯಾಂಡ್ ಬೆಂಗಳೂರು ಅಂದ್ರೆ ಕನ್ನಡ : ಇನ್ಫೋಸಿಸ್​ ಸುಧಾಮೂರ್ತಿ

ಬೆಂಗಳೂರು: ಬ್ರ್ಯಾಂಡ್‌ ಬೆಂಗಳೂರು ಯೋಜನೆಯ ಮೂಲಕ ಬೆಂಗಳೂರು ನಗರವನ್ನು ಸ್ವಚ್ಛ, ಹಸಿರು ಹಾಗೂ ಸುಸ್ಥಿರ ನಗರವಾಗಿ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಯುವ ನಾಯಕತ್ವ ಸಮ್ಮೇಳನ ಆಯೋಜಿಸಲಾಗಿದೆ.

ಇದನ್ನೂ  ಓದಿ: ಕೆಲಸಕ್ಕೆ ಬಾರದಿರೋ ಹೆಚ್​ಡಿಕೆ ನಾ ಆಯ್ಕೆ ಮಾಡಿದರೇ ಪ್ರಯೋಜನ ಇಲ್ಲಾ: ಶಾಸಕ ಬಾಲಕೃಷ್ಣ

ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ಇನ್ಪೋಸಿಸ್​ ಮುಖ್ಯಸ್ಥೆ ಸುಧಾಮೂರ್ತಿ ಅವರು ಇಂಗ್ಲೀಷ್ ಮಾತನಾಡಬೇಕು ಅಂತಾ ಕನ್ನಡ ಬಿಡಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.

ಬ್ರ್ಯಾಂಡ್ ಬೆಂಗಳೂರು ಅಂದ್ರೆ ಕನ್ನಡ. ಇಂಗ್ಲೀಷ್ ಮಾತನಾಡಬೇಕು ಅಂತಾ ಕನ್ನಡ ಬಿಡಬೇಡಿ. ಮಕ್ಕಳ ಮನಸ್ಸು ಯಾವುದೇ ಪೂರ್ವಪೀಡಿತವಾಗಿರಲ್ಲ. ನಾನು ಮಕ್ಕಳ ಪುಸ್ತಕ ಬರೆದಾಗ ಮಕ್ಕಳನ್ನ ಕೇಳ್ತೀನಿ. ಏನಾದ್ರೂ ತಪ್ಪಿದ್ರೆ ಹೇಳಿ ಅಂತಾ. ಬ್ರೈಟ್ ಐಡಿಯಾ ಬರೋದೇ ಮಕ್ಕಳಿಂದ. ಎಲ್ಲಾ ನಗರಗಳಲ್ಲೂ ಸಮಸ್ಯೆ ಇರುತ್ತೆ. ಆದರೆ ಸಮಸ್ಯೆಗಳನ್ನ ಬಗೆಹರಿಸುವ ಪ್ರಯತ್ನ ಇರಬೇಕು ಎಂದು ಸುಧಾಮೂರ್ತಿ ಅವರು ತಿಳಿಸಿದರು.

RELATED ARTICLES

Related Articles

TRENDING ARTICLES