Sunday, December 22, 2024

ಹೆಂಡತಿ ಸೆಕ್ಸ್ ನಿರಾಕರಿಸಿದರೆ ವಿಚ್ಛೇದನ ನೀಡಬಹುದು : ಹೈಕೋರ್ಟ್

ಮಧ್ಯಪ್ರದೇಶ : ಪತ್ನಿ ಲೈಂಗಿಕ ಸಂಬಂಧಕ್ಕೆ (ಸೆಕ್ಸ್‌) ನಿರಾಕರಿಸಿದರೆ ವಿಚ್ಛೇದನ ನೀಡುವ ಹಕ್ಕು ಪತಿಗೆ ಇದೆ ಎಂದು ಮಧ್ಯಪ್ರದೇಶ ಹೈಕೋರ್ಟ್​ ಹೇಳಿದೆ.

ವ್ಯಕ್ತಿಯೊಬ್ಬ ತನ್ನ ಪತ್ನಿ ವಿರುದ್ಧ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​ ಈ ರೀತಿ ಅಭಿಪ್ರಾಯಪಟ್ಟಿದೆ.

2006ರಲ್ಲಿ ಮದುವೆಯಾಗಿದ್ದು ಅಂದಿನಿಂದ ಈವರೆಗೆ ಪತ್ನಿ (ಲೈಂಗಿಕ ಸಂಬಂಧ) ದೂರವಾಗುತ್ತಿದ್ದಾಳೆ. ಲೈಂಗಿಕ ಸಂಭೋಗವನ್ನು ನಿರಾಕರಿಸುವ ಪತ್ನಿಯ ಏಕಪಕ್ಷೀಯ ನಿರ್ಧಾರದಿಂದಾಗಿ ಮದುವೆಯನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಪತಿಯೊಬ್ಬರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ಈ ಸುದ್ದಿ ಓದಿದ್ದಿರಾ? : ಹೆಂಡ್ತಿಯ ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್​ಮೇಲ್​ ಮಾಡಿದ ಪತಿರಾಯ 

ಪ್ರಕರಣದ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ಈ ರೀತಿ ನಿರಾಕರಿಸುವುದರಿಂದ ಪತಿಗೆ ಮಾನಸಿಕ ಹಿಂಸೆ ನೀಡಿದಂತಾಗುತ್ತದೆ. ಅಲ್ಲದೆ, ವಿಚ್ಛೇದನ ಪಡೆಯುವ ಹಕ್ಕು ಪತಿಗೆ ಇದೆ ಎಂದು ಹೇಳಿದೆ. ಹಿಂದೂ ವಿವಾಹ ಕಾಯಿದೆಯಡಿ ಪತ್ನಿಯೂ ಲೈಂಗಿಕವಾಗಿ ಸಹಕರಿಸದಿದ್ದರೆ, ಇದು ವಿಚ್ಛೇದನವನ್ನು ಪಡೆಯಲು ಪತಿಗೆ ಮಾನ್ಯವಾದ ಆಧಾರವಾಗಿದೆ ಎಂದು ಹೈಕೋರ್ಟ್​ ಖಚಿತಪಡಿಸಿದೆ.

RELATED ARTICLES

Related Articles

TRENDING ARTICLES