Monday, December 23, 2024

ಟೀ ಪ್ರಿಯರೇ ಹುಷಾರ್!‌ ಬ್ರಾಂಡೆಡ್‌ ಟೀ ಪ್ಯಾಕಿನಲ್ಲಿ ನಕಲಿ ಪುಡಿ

ನೆಲಮಂಗಲ: ನೀವು ಬ್ರಾಂಡೆಡ್‌ ಟೀ ಪುಡಿಯನ್ನು ತಗೆದುಕೊಳ್ಳತ್ತಾರೆ ಎಚ್ಚರದಿಂದ ಇರಬೇಕು.ಸ್ವಲ್ಪ ಯಾಮಾರಿದ್ರೂ ನಿಮ್ಮ ಟೀ ಕಲಬೆರಕೆಯಾಗುತ್ತದೆ.

ಹೌದು,ನಕಲಿ ಟೀ ಪೌಡರ್‌ ಕಲಬೆರಕೆ  ಹಾಗೂ ನಕಲಿ ಡಿಟರ್ಜೆಂಟ್‌ ಪೌಡರ್‌ ಮಿಕ್ಸಿಂಗ್‌ನ ಕರಾಳ ಜಾಲವೊಂದು ಪತ್ತೆಯಾಗಿದೆ.

3 ರೋಸಸ್‌, ತಾಜ್‌ಮಹಲ್‌ ಮುಂತಾದ ಬ್ರಾಂಡೆಡ್ ಟೀ ಕುಡಿದರೂ ಬಾಯಿಗೆ ರುಚಿ ಸಿಕ್ತಿಲ್ಲ, ರಿನ್, ಸರ್ಫ್‌ ಎಕ್ಸೆಲ್ ಪೌಡರ್ ಹಾಕಿದರೂ ಬಟ್ಟೆಯಲ್ಲಿನ ಕೊಳೆ ಹೋಗ್ತಿಲ್ಲ ಎಂದಾದರೆ ನೀವು ಬಳಸುತ್ತಿರುವ ಟೀ ಪುಡಿ‌ ಮತ್ತು ಡಿಟರ್ಜೆಂಟ್ ಅಸಲಿ ಅಲ್ಲದೆ ನಕಲಿ ಆಗಿರಬಹುದು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಓರ್ವ ಪುರುಷ, ಮಹಿಳೆಯ ಶವ ಪತ್ತೆ 

ಬ್ರಾಂಡೆಡ್ ಪದಾರ್ಥಗಳಿಗೆ ಅಗ್ಗದ ನಕಲಿ ದ್ರವ್ಯಗಳನ್ನು ಕಲಬೆರಕೆ ಮಾಡುವ ಜಾಲವೂ ಪೂಲೀಸ್ ಬಲಿಗೆ ಸಿಕ್ಕಿ ಬಂದಿದ್ದಾರೆ.

ನಗರದ ಹೊರವಲಯದ ಮಾದನಾಯಕನಹಳ್ಳಿಯಲ್ಲಿ ಈ ಅಕ್ರಮದ ಅಡ್ಡೆ ನಡೆಯುತ್ತಿತ್ತು. ಹಿಂದೂಸ್ಥಾನ್ ಯೂನಿ‌ಲಿವರ್ ಸಂಸ್ಥೆಯ ಅಧಿಕಾರಿಗಳ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಆಗ ಇಲ್ಲಿದ್ದ ನಕಲಿ 3 ರೋಜಸ್ ಟೀ ಪುಡಿ ಜಾಲ ಕಂಡು ಶಾಕ್​ ಆಗಿದ್ದಾರೆ.

ನಕಲಿ ಟೀ ಪುಡಿ ಮತ್ತು ಸರ್ಫ್ ಎಕ್ಸೆಲ್ ಫ್ಯಾಕ್ಟರಿ ನಡೆಸುತ್ತಿದ್ದ ಬೂಮರಾಮ್, ಮಾಧು ಸಿಂಗ್, ವಿಕ್ರಮ್ ಸಿಂಗ್ ಮತ್ತು ಶಿವಕುಮಾರ ಎಂಬವರನ್ನು ದಾಳಿಯ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇವರು ಬ್ರಾಂಡೆಡ್ ಪ್ಯಾಕ್‌ನಲ್ಲಿ ನಕಲಿ ಟೀ ಪುಡಿ ತುಂಬಿ, ಸಣ್ಣ ಸಣ್ಣ ಪ್ಯಾಕ್‌ಗಳಾಗಿ ಮಾಡುತ್ತಿದ್ದರು. ನಕಲಿ ಬ್ರಾಂಡ್‌ಗಳನ್ನು ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ, ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದರು.

ದಾಳಿ ವೇಳೆ ಲಕ್ಷಾಂತರ ರೂ ಮೌಲ್ಯದ ಟೀ ಪುಡಿ ಮತ್ತು ಡಿಟರ್ಜೆಂಟ್ ಪೌಡರ್ ಸೀಜ್ ಮಾಡಿಕೊಳ್ಳಲಾಗಿದೆ. ಫ್ಯಾಕ್ಟರಿಯಲ್ಲಿದ್ದ ಪ್ಯಾಕಿಂಗ್ ಮಷಿನ್, ಮಿಕ್ಸಿಂಗ್ ಮಷಿನ್‌ಗಳನ್ನು ಸೀಜ್ ಮಾಡಿಕೊಳ್ಳಲಾಗಿದೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES