Saturday, December 21, 2024

ಮೃತ ಅಭಿಮಾನಿಗಳ ಕುಟುಂಬದ ಜೊತೆ ನಾನಿದ್ದೇನೆ ಯಶ್ ಭರವಸೆ​!

ಗದಗ: ರಾಕಿಂಗ್ ಸ್ಟಾರ್ ಯಶ್ ಅವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರೋ ಮೂವರು ಅಭಿಮಾನಿಗಳ ಕುಟುಂಬಕ್ಕೆ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಇದೇ ವೇಳೆ, ಇನ್ಮುಂದೆ ನನ್ನ ಬ್ಯಾನರ್ ಎಲ್ಲೂ ಕಟ್ಟಬೇಡಿ, ಎಲ್ಲಿಯೂ ಕಟೌಟ್ ಹಾಕಬೇಡಿ ಎಂದು ಫ್ಯಾನ್ಸ್‌ಗೆ ಯಶ್ ಮನವಿ ಮಾಡಿದ್ದಾರೆ.

ಗದಗದ ಸೊರಣಗಿ ಗ್ರಾಮದಲ್ಲಿ ಮೃತರಾಗಿರೋ ಮುರಳಿ, ನವೀನ್, ಹನುಮಂತ ಮೂವರ ಕುಟುಂಬಕ್ಕೂ ಯಶ್ ತೆರಳಿ ಭೇಟಿ ನೀಡಿ ಸಾಂತ್ವನ ಹೇಳಿದ್ದಲ್ಲದೇ ಅವರ ಜೊತೆ ಇರೋದಾಗಿ ಯಶ್ ಭರವಸೆ ನೀಡಿದ್ದಾರೆ. ಅವರ ಕುಟುಂಬಕ್ಕೆ ಏನು ಸಹಾಯ ಬೇಕೋ ಅದನ್ನು ಮಾಡುತ್ತೇನೆ ಎಂದು ಯಶ್ ಮಾತನಾಡಿದ್ದಾರೆ. ನಿಮ್ಮೊಂದಿಗೆ ನಾನು ಇದ್ದೇನೆ. ಯಾವುದೇ ಕಾರಣಕ್ಕೂ ಆತಂಕ ಬೇಡ ಎಂದಿದ್ದಾರೆ. ಈ ದುರ್ಘಟನೆ ಆಗಬಾರದಿದ್ದು, ನನಗೂ ತುಂಬಾ ದುಃಖ ಆಗಿದೆ ಎಂದು ಯಶ್ ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಸ್ಪರ್ಶ ಘಟನೆ: ಮೃತ ಅಭಿಮಾನಿಗಳ ಮನೆಗೆ ಇಂದು ಯಶ್ ಭೇಟಿ

ನಿಮ್ಮ ಪ್ರೀತಿಗೆ ನಾನು ಸದಾ ಆಭಾರಿಯಾಗಿದ್ದೇನೆ. ಕಲಾವಿದರ ಮೇಲೆ ಅಭಿಮಾನ ಇರಲಿ ಆದರೆ ಈ ರೀತಿಯ ಅಭಿಮಾನ ಬೇಡ ಎಂದು ಯಶ್ ಮಾತನಾಡಿದ್ದಾರೆ.

RELATED ARTICLES

Related Articles

TRENDING ARTICLES