ಮೈಸೂರು : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಯಾರನ್ನ ಹೋಗಳುತ್ತಾರೋ ಅವರಿಗೆ ಖೆಡ್ಡಾ ತೋಡಿದ್ದಾರೆ ಅಂತ ಅರ್ಥ ಎಂದು ಕುಮಾರಸ್ವಾಮಿಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕುಟುಕಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಬಿಜೆಪಿಯ ಸ್ಪೋಕ್ ಪರ್ಸನ್ಗಿಂತ ಚೆನ್ನಾಗಿ ಸ್ಪೋಕ್ ಮ್ಯಾನ್ ಆಗಿಬಿಟ್ಟಿದ್ದಾರೆ ಎಂದು ಕಾಲೆಳೆದಿದ್ದಾರೆ.
ಮೈಸೂರು ಕೊಡಗು ಕ್ಷೇತ್ರ ಕಸಿದುಕೊಳ್ಳುವುದು ಜೆಡಿಎಸ್ ಆಲೋಚನೆ. ಬಿಜೆಪಿ ಜೊತೆ 4 ಕ್ಷೇತ್ರ ಕೇಳಿದ್ದಾರೆ. ಆದರೆ, ಕೇವಲ 3 ಕ್ಷೇತ್ರ ಕೊಡಲು ಬಿಜೆಪಿ ಒಪ್ಪಿದೆ. ಹೇಗಾದರೂ ಮಾಡಿ ಮೈಸೂರು ಕ್ಷೇತ್ರವನ್ನು ತೆಗೆದುಕೊಳ್ಳಲು ಪ್ಲಾನ್ ಇದೆ. ಇದಕ್ಕಾಗಿ ಪ್ರತಾಪ್ ಸಿಂಹ ತಮ್ಮನ ಬಂಧನದಲ್ಲಿ ದೇವೇಗೌಡ ಕುಟುಂಬದ ಕೈವಾಡವಿದೆ. ಈ ಬಗ್ಗೆ ಪತ್ರಿಕೆವೊಂದರಲ್ಲಿ ವರದಿ ಆಗಿದೆ ಎಂದು ಹೇಳಿದ್ದಾರೆ.
ಮೈಸೂರಿನಿಂದ ಸಾರಾ ಮಹೇಶ್ ಸ್ಪರ್ಧೆ
ಪ್ರತಾಪ್ ಸಿಂಹ ಪರವಾಗಿ ಕುಮಾರಸ್ವಾಮಿ ಮಾತನಾಡುತ್ತಿರುವ ಉದ್ದೇಶವೇನು? ಅಂತ ಜನ ಕೇಳ್ತಿದ್ದಾರೆ. ಮೈಸೂರು-ಕೊಡಗು ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ನಿರಾಕರಿಸಿದೆ. ಕ್ಷೇತ್ರ ಪಡೆದುಕೊಳ್ಳಲು ಹೆಚ್ಡಿಕೆ ಹಾಗೂ ಹೆಚ್ಡಿಕೆ ಪರಸ್ಪರ ಮಾತುಕತೆ ನಡೆಸಿರುವ ಬಗ್ಗೆ ಚಿಂತನೆ ಮಾಡಿದ್ದಾರೆ. ಮೈಸೂರಿನಿಂದ ಮಾಜಿ ಶಾಸಕ ಸಾರಾ ಮಹೇಶ್ ಕಣಕ್ಕಿಳಿಯುತ್ತಾರೆ ಎಂಬ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಉತ್ತರ ನೀಡಲಿ
ಸದ್ಯ ಜೆಡಿಎಸ್ ಸ್ಪರ್ಧಿಸುವ ನಾಲ್ಕು ಕ್ಷೇತ್ರದಲ್ಲೂ ದೇವೇಗೌಡರ ಕುಟುಂಬಸ್ಥರು ಸ್ಪರ್ಧಿಸಲಿ ಎನ್ನುವುದು ನಮ್ಮ ಆಶಯ. ಪ್ರತಾಪ್ ಸಿಂಹ ತಮ್ಮನ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಬೀಟೆ ಮರಗಳನ್ನು ತಂದು ಹಾಕಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡುತ್ತಾರೆ. ಮರದ ಬುಡಗಳು ಇರತ್ತದೆ ತಾನೇ. ಈ ಬೆಳವಣಿಗೆಗೆಲ್ಲ ಕುಮಾರಸ್ವಾಮಿ ಉತ್ತರ ನೀಡಲಿ ಎಂದು ಎಂ. ಲಕ್ಷ್ಮಣ್ ಚಾಟಿ ಬೀಸಿದ್ದಾರೆ.