Thursday, December 26, 2024

ಸುಮಲತಾರನ್ನು ಭೇಟಿಯಾಗಿ ಚರ್ಚೆ ಮಾಡ್ತಿನಿ : ಕುಮಾರಸ್ವಾಮಿ

ಹಾಸನ : ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಭೇಟಿ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರನ್ನು ಬೇಕಾದರೂ ಭೇಟಿ ಮಾಡಿ ಚರ್ಚೆ ಮಾಡ್ತಿನಿ ಅಂತ ಹೇಳಿದ್ದೀನಿ ಎಂದು ಹೇಳಿದ್ದಾರೆ.

ಮುಂದಿನ‌ ಚುನಾವಣೆ ದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಇದೆ, ಅದಕ್ಕೆ ಸಂಬಂಧಪಟ್ಟಂತೆ ಬಿಜೆಪಿಯಲ್ಲಿ ಇರುವ ಯಾರನ್ನು ಬೇಕಾದರೂ ಭೇಟಿ ಮಾಡಿ ಚರ್ಚೆ ಮಾಡ್ತಿನಿ. ಸುಮಲತಾ ಅವರು ಬಿಜೆಪಿ ಮೆಂಬರ್ ಅಲ್ಲ ಅಂತ ಶಿಷ್ಯ ಇವತ್ತು ಹೇಳಿರಬೇಕು. ನಾನು ಯಾರನ್ನು ಬೇಕಾದರೂ ಭೇಟಿ ಮಾಡಿ ಚರ್ಚಿಸುವೆ ಎಂದು ತಿಳಿಸಿದ್ದಾರೆ

28 ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು

ಸುಮಲತಾ ಅವರು ಬಿಜೆಪಿ ಮೆಂಬರ್ ಆಗಿರದಿದ್ದರೆ ಅವರನ್ನು ಭೇಟಿ ಮಾಡುವ ಅವಶ್ಯಕತೆ ಬರಲ್ಲ. ಅವರು ಬಿಜೆಪಿಯ ಮೈತ್ರಿಯಲ್ಲಿ ಇದ್ದಾರೆ, ಹಿಂದಿನ‌ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಬೆಂಬಲ ಕೊಟ್ಟಿದೆ. ಅದು ಈಗ ಅವರಲ್ಲಿ ಇಲ್ಲದೆ ಇದ್ದರೆ ಭೇಟಿ ಮಾಡುವ ಅವಶ್ಯಕತೆ ಇರಲ್ಲ. 28ಕ್ಕೆ 28 ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ದೃಷ್ಟಿಯಿಂದ ನಾನು ಯಾರನ್ನು ಬೇಕಾದರೂ ಭೇಟಿ ಮಾಡಲು ತಯಾರಾಗಿದ್ದೇನೆ ಎನ್ನುವ ಮೂಲಕ ಸಂಸದೆ ಸುಮಲತಾರನ್ನೂ ಭೇಟಿ ಮಾಡುವುದಾಗಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

RELATED ARTICLES

Related Articles

TRENDING ARTICLES