ಬೆಂಗಳೂರು : ಫ್ರಾನ್ಸ್ ನೂತನ ಪ್ರಧಾನಿಯಾಗಿ ಗೇಬ್ರಿಯಲ್ ಅಟಲ್ ಅವರು ಆಯ್ಕೆಯಾಗಿದ್ದಾರೆ.
ಈ ಹಿಂದೆ ಪ್ರಧಾನಿಯಾಗಿದ್ದ ಎಲಿಜಬೆತ್ ಬೋರ್ನ್ ಇತ್ತೀಚೆಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಶಿಕ್ಷಣ ಸಚಿವರಾಗಿದ್ದ ಗೇಬ್ರಿಯಲ್ ಅಟಲ್ ಅವರನ್ನು ಇದೀಗ ನೇಮಕ ಮಾಡಲಾಗಿದೆ.
ಕೇವಲ 34 ವರ್ಷದ ಗೇಬ್ರಿಯಲ್ ಅಟಲ್ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಫ್ರಾನ್ಸ್ ದೇಶದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ವಿಶ್ವದ ಮೊದಲ ಸಲಿಂಗಕಾಮಿ ವ್ಯಕ್ತ ಕೂಡ ಗೇಬ್ರಿಯಲ್ ಅಟಲ್ ಆಗಿದ್ದಾರೆ.
ಗೇಬ್ರಿಯಲ್ ಅಟಲ್ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ನಿಕಟವರ್ತಿ. ಕೊರೋನಾ ಸಂದರ್ಭದಲ್ಲಿ ಸರ್ಕಾರದ ವಕ್ತಾರರಾಗಿದ್ದರು. ಗೇಬ್ರಿಯಲ್ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರು. ಒಬ್ಬ ಬುದ್ಧಿವಂತ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.