Sunday, December 22, 2024

PSI Re-Exam: PSI ಪರೀಕ್ಷಾ ಮಾರ್ಗಸೂಚಿ ಪ್ರಕಟ: ಅಭ್ಯರ್ಥಿಗಳು ಕಟ್ಟನಿಟ್ಟಾಗಿ ಈ ನಿಯಮ ಪಾಲಿಸಲೇಬೇಕು!

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಸರ್ಕಾರ ಮರುಪರೀಕ್ಷೆಗೆ ದಿನಾಂಕ ನಿಗದಿ ಮಾಡಿತ್ತು. ಅದ್ರೆ ಇದೀಗ ದಿನಾಂಕ ಜೊತೆಗೆ ಸಮಯ, ಅಂಕಗಳು, ಸೇರಿದಂತೆ ಮಾರ್ಗಸೂಚಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಪ್ರಕ್ರಟಿಸಿದೆ.

ಇದೇ ತಿಂಗಳ ಜನವರಿ 23ರಂದು ಪಿಎಸ್‌ಐ ಮರು ಪರೀಕ್ಷೆ ನಡೆಸಲಿದ್ದು, ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಎರಡು ಪರೀಕ್ಷೆಗಳು ಜರುಗಲಿವೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕಟ್ಟುನಿಟ್ಟಿ ಆಗಿ ಕೆಇಎ ಹೊರಡಿಸಿದೆ, ಮಾರ್ಗಸೂಚಿಗಳು ಈ ಕೆಳಗಿನಂತಿವೆ.

PSI ಪರೀಕ್ಷೆಯ KEA ಸೂಚನೆಗಳ ಪಟ್ಟಿ 

* ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ತಪಾಸಣೆಗೆ ಒಳಪಡುವ ಹಿನ್ನೆಲೆಯಲ್ಲಿ ಬೆಳಗ್ಗೆ 8.30 ಕ್ಕೆ ಸರಿಯಾಗಿ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.

* ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಅಂದರೆ, ಡ್ರೈವಿಂಗ್ ಲೈಸೆನ್ಸ್ / ಪಾಸ್‌ಪೋರ್ಟ್ / ಆಧಾರ್ ಕಾರ್ಡ್ / ಪಾನ್ ಕಾರ್ಡ್ / ಮತದಾರರ ಗುರುತಿನ ಚೀಟಿ ಹಾಜರುಪಡಿಸಿದರೆ ಮಾತ್ರ ಅಭ್ಯರ್ಥಿಯನ್ನು ಪರೀಕ್ಷಾ ಕೊಠಡಿ ಪ್ರವೇಶ ಇರಲಿದೆ.

* ಮೊಬೈಲ್ ಗಳನ್ನು ನಿಷೇಧಿಸಲಾಗಿದ್ದು, ಮೊಬೈಲ್ ನಲ್ಲಿ ಗುರುತಿನ ಚೀಟಿಯನ್ನು ತೋರಿಸುವಂತಿಲ್ಲ ಮತ್ತು ಅಂತಹ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಅನುವು ಮಾಡಿಕೊಡುವುದಿಲ್ಲ.

* ಅಭ್ಯರ್ಥಿಗಳು ಸಾಧ್ಯವಾದಷ್ಟು ಕಾಲರ್‌ಗಳು ಇಲ್ಲದೆ ಇರುವ ಶರಟುಗಳನ್ನು ಹಾಕಿಕೊಳ್ಳುವುದು.

* ಯಾವುದೇ ತೆರನಾದ ಜೀನ್ಸ್ ಪ್ಯಾಂಟ್, ಬೆಲ್ಟ್, ಶೂ ಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ಇರುವುದಿಲ್ಲ. ಅಭ್ಯರ್ಥಿಗಳ ಎಚ್ಚರಿಕೆ ವಹಿಸಬೇಕು.

* ಕಿವಿ ಅಥವಾ ಬಾಯಿಯನ್ನು ಮುಚ್ಚಿಕೊಳ್ಳುವಂತಹದನ್ನು ಧರಿಸಿ ಅಥವಾ ಯಾವುದೇ ರೀತಿಯ ಫೇಸ್ ಮಾಸ್ಕ್ ಅನ್ನೂ ಸಹ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ.

* ವಾಟರ್ ಬಾಟಲ್ ಗಳನ್ನು ಅನುಮತಿಸುವುದಿಲ್ಲ. ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು.

* ಮೊದಲನೇ ಅವಧಿ ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಹೊರ ಹೋಗಲು ಅನುಮತಿ ಇರುವುದಿಲ್ಲ.

ಇದರೊಂದಿಗೆ ಕಾಲ ಕಾಲಕ್ಕೆ ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವ ಸೂಚನೆಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

 

 

 

 

RELATED ARTICLES

Related Articles

TRENDING ARTICLES