Tuesday, January 21, 2025

ವಿದ್ಯುತ್ ಸ್ಪರ್ಶ ಘಟನೆ: ಮೃತ ಅಭಿಮಾನಿಗಳ ಮನೆಗೆ ಇಂದು ಯಶ್ ಭೇಟಿ

ಗದಗ: ನಟ ಯಶ್​ ಜನ್ಮದಿನಕ್ಕೆ ಬ್ಯಾನರ್ ಕಟ್ಟಲು ಹೋಗಿ ಮೂವರು ಯುವಕರು ಸಾವಿಗೀಡಾಗಿದ್ದಾರೆ. ಈ ಘಟನೆ ಹಿನ್ನೆಲೆ ಮೃತ ಕುಟುಂಬಗಳಿಗೆ ಸಾಂತ್ವನ ಹೇಳಲು ನಟ ಯಶ್​ ಇಂದು ಗದಗ್​ ಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಇದನ್ನೂ ಓದಿ: ನಟ ಯಶ್ ಜನ್ಮದಿನಕ್ಕೆ ಕಟೌಟ್​​​ ಕಟ್ಟುವಾಗ ದುರಂತ: ಮೂವರು ಸ್ಥಳದಲ್ಲೇ ಸಾವು!

ಗದಗದ ಲಕ್ಷ್ಮೇಶ್ವರ ತಾಲೂಕಿನ ಸೊರಣಗಿ ಗ್ರಾಮದಲ್ಲಿ ಜ.8 ರಂದು ಯಶ್​ ಜನ್ಮದಿನದ ಹಿನ್ನೆಲೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ಗ್ರಾಮದಲ್ಲಿ ಬೃಹತ್ ಬ್ಯಾನರ್ ನಿಲ್ಲಿಸುವ ವೇಳೆ ವಿದ್ಯುತ್​ ಲೈನ್​ ತಾಗಿ ಗ್ರಾಮದ  ಹನಮಂತ ಹರಿಜನ, ಮುರಳಿ ನಡವಿನಮನಿ, ನವೀನ್ ಗಾಜಿ ಯುವಕರು ಸ್ಥಳದಲ್ಲೇ ಸಾವಿಗಡಾಗಿದ್ದಾರೆ. ಇನ್ನೂ, ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಘಟನೆ ಸಂಬಂಧ ಲಕ್ಷ್ಮೇಶ್ವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಯುವಕರ ಸಾವಿನ ಸುದ್ದಿ ತಿಳಿದು ಆಘಾತಕ್ಕೊಳಗಾಗಿರುವ ನಟ ಯಶ್​ ಕಂಬನಿ ಮಿಡಿದಿದ್ದು ತಮ್ಮ ಅಭಿಮಾನಿಗಳ ಕುಟುಂಬವನ್ನು ಇಂದು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.

RELATED ARTICLES

Related Articles

TRENDING ARTICLES