Wednesday, January 22, 2025

5ದಿನಗಳ ಹಸುಗೂಸನ್ನು ಹೊತ್ತು ಪತಿಯ ವಿರುದ್ದ ದೂರು ನೀಡಲು ಬಂದ ಪತ್ನಿ!

ಹಾವೇರಿ : ತನ್ನ ಪತಿಯ ವಿರುದ್ದ ದೂರು ನೀಡಲು 5 ದಿನದ ಹಸುಗೂಸಿನೊಂದಿಗೆ ಪತ್ನಿ ಹಾವೇರಿ ಎಸ್​ ಪಿ ಕಚೇರಿಗೆ ಆಗಮಿಸಿದ ಘಟನೆ ನಡೆದಿದೆ.

ಪತಿ ಸಿದ್ದಲಿಂಗಪ್ಪ ವಿರುದ್ದ ಪತ್ನಿ ಗೀತಾ ಎಸ್​ಪಿ ಕಚೇರಿಯಲ್ಲಿ ದೂರು ನೀಡಿದ್ದಾರೆ. ತನ್ನ 4 ವರ್ಷದ ಹೆಣ್ಣುಮಗುವನ್ನು ಮಾರಾಟ ಮಾಡಲು ಪತಿ ಸಿದ್ದಲಿಂಗಪ್ಪ ಮುಂದಾಗಿದ್ದಾನೆ ಎಂದು ಆರೋಪಿಸಿ ಪತ್ನಿ ಎಸ್​ಪಿ ಕಚೇರಿಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ: ಕರವೇ ಅಧ್ಯಕ್ಷ ನಾರಾಯಣಗೌಡ ಗೆ ಜಾಮೀನು ಸಿಕ್ಕಿದರೂ ತಪ್ಪದ ಸಂಕಷ್ಟ!

6 ವರ್ಷದ ಹಿಂದೆ ಹುಬ್ಬಳಿ ಮೂಲದ ಗೀತಾಳನ್ನ ಮದುವೆಯಾಗಿದ್ದ ಬ್ಯಾಡಗಿಯ ಸಿದ್ದಲಿಂಗಪ್ಪ,
ಜನವರಿ 2 ರಂದು ತನ್ನ 4 ವರ್ಷದ ಮಗಳನ್ನ ಅಪಹರಣ ಮಾಡಲಾಗಿದೆ ಎಂದು ಹಾವೇರಿ ಜಿಲ್ಲೆ ರಾಣೇಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿದ್ದ, ದೂರಿನ ಆಧಾರದ ಮೇಲೆ ಒಬ್ಬನನ್ನು ಪೊಲೀಸರು ಬಂಧಿಸಿದ್ದರು.

ಈ ಬೆಳವಣಿಗೆಗಳ ಹಿನ್ನೆಲೆ ಮಗಳ ಅಪಹರಣ ಸಂಬಂಧ ದೂರು ನೀಡಿದ್ದ ಗಂಡನ ವಿರುದ್ದ ಮಗಳ ಮಾರಾಟ ಮಾಡಲು ಪತಿ ಮುಂದಾಗಿದ್ದಾನೆ ಎಂದು ಆರೋಪಿಸಿ ಪತ್ನಿ ಗೀತಾ 5 ದಿನಗಳ ಹಸುಗೂಸನ್ನು ಹೊತ್ತು ಹಾವೇರಿ ಜಿಲ್ಲಾ ಎಸ್​ಪಿ ಕಚೇರಿಗೆ ಭೇಟಿ ನೀಡಿ ಪತಿಯ ಅನೈತಿಕ ಸಂಬಂಧದ ವಿರುದ್ದ ದೂರು ದಾಖಲಿಸಿದ್ದಾಳೆ.

RELATED ARTICLES

Related Articles

TRENDING ARTICLES