Sunday, December 22, 2024

ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶವಿಲ್ಲ: ವಿವಾದ ಸೃಸ್ಟಿಸಿದ ಬ್ಯಾನರ್​!

ವಿಜಯಪುರ: ಈ ಹಿಂದೆ ರಾಜ್ಯದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ವ್ಯಪಾರಿ ಧರ್ಮ ದಂಗಲ್​ ಈ ಬಾರಿಯೂ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿದೆ. ವಿಜಯಪುರ ನಗರದಲ್ಲಿ ಮತ್ತೆ ಧರ್ಮ ದಂಗಲ್ ಶುರುವಾಗಿದೆ.

ಸಂಕ್ರಾಂತಿ ಹಬ್ಬದ ವೇಳೆ ನಡೆಯುವ ಸಿದ್ದೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಅನ್ಯಕೋಮಿನ ವ್ಯಾಪಾರಿಗಳಿಗೆ ಅವಕಾಶ ನೀಡುವುದಿಲ್ಲ. ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ದೇಗುಲದ ಮುಂದೆ ಹಿಂದೂ ಸಂಘಟನೆಗಳ ಒಕ್ಕೂಟ ಬ್ಯಾನರ್ ಹಾಕಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೋಳಿ ವಿರುದ್ದ 420 ಕೇಸ್​ ದಾಖಲು!

ಈ ದೇಶದ ಕಾನೂನಿಗೆ, ನಾಯಾಲಯದ ತೀರ್ಪಿಗೆ ಗೌರವ ನೀಡದವರಿಗೆ, ಪದೇ ಪದೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ, ಜಿಹಾದ್ ಹೆಸರಿನಲ್ಲಿ ದೇಶದ ಅಖಂಡತೆಗೆ ಮಾರಕವಾಗಿರುವ ಕ್ರೂರ ಮತಾಂಧರೊಂದಿಗೆ ಹಿಂದೂಗಳು ವ್ಯಾಪಾರ, ವಹಿವಾಟು ನಡೆಸಲ್ಲ. ಹಿಂದೂಗಳ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ ಎಂದು ದೇವಸ್ಥಾನದ ಎದುರಿಗೆ ಹಿಂದೂ ಸಂಘಟನೆಗಳ ಒಕ್ಕೂಟ ಬ್ಯಾನರ್ ಹಾಕಿದೆ.

ಅನ್ಯಕೋಮಿನವರಿಗೆ ಅವಕಾಶ ನೀಡದಂತೆ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅವರಿಗೂ ಹಿಂದೂ ಸಂಘಟನೆಗಳ ಒಕ್ಕೂಟ ​ಮನವಿ ಸಲ್ಲಿಸಿದೆ. ಸದ್ಯ ಇದು ಪರ ವಿರೋಧಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES