Sunday, November 24, 2024

BMTC ಮತ್ತು KSRTC ಬಸ್​ ಕಂಡಕ್ಟರ್​ಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಇಲಾಖೆ!

ಬೆಂಗಳೂರು: ರಾಜ್ಯದ KSRTC ಮತ್ತು BMTC ಬಸ್‌ ಕಂಡಕ್ಟರ್‌ಗಳಿಗೆ ಸಾರಿಗೆ ಇಲಾಖೆ ಖಡಕ್‌ ಸೂಚನೆಯೊಂದನ್ನು ಭಾನುವಾರ ಕೊಟ್ಟಿದೆ.

ಇಷ್ಟು ದಿನ 10ರೂ. ನಾಣ್ಯ ಕೊಟ್ಟರೆ ಕಂಡಕ್ಟರ್‌ಗಳು ನಿರಾಕರಿಸುತ್ತಿದ್ದರು. ನಾಣ್ಯ ಕೊಟ್ಟಾಗ ಇದು ಹೋಗಲ್ಲ ನೋಟು ಕೊಡಿ ಎಂದು ಹೇಳುತ್ತಿದ್ದರು. ಹೀಗಾಗಿ 10 ರೂಪಾಯಿ ನಾಣ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ತಿಳುವಳಿಕೆ ಪತ್ರದ ಮೂಲಕ ಸಾರಿಗೆ ಇಲಾಖೆಯ ಕಾರ್ಯದರ್ಶಿಯು ಎಲ್ಲಾ ನಿಗಮಗಳಿಗೂ ವಾರ್ನಿಂಗ್ ಮಾಡಿದ್ದಾರೆ.
ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ , ವಾಯುವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ನಿಗಮಕ್ಕೆ ಸಾರಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದ್ದು, ಅದರಲ್ಲಿ ರಾಜ್ಯದ ಎಲ್ಲಾ ಸಾರಿಗೆ ಬಸ್ ಗಳಲ್ಲೂ 10 ರೂ. ನಾಣ್ಯ ಪಡೆಯುವಂತೆ ಆದೇಶಿಸಲಾಗಿದೆ. ಬಸ್ ಪ್ರಯಾಣದ ವೇಳೆ ಪ್ರಯಾಣಿಕರು 10 ರೂ. ನಾಣ್ಯ ನೀಡಿದರೆ ಪಡೆಯಬೇಕು. ಒಂದು ವೇಳೆ 10 ರೂ. ನಾಣ್ಯ ಪಡೆಯದೇ ಇದ್ದರೆ, ಈ ಬಗ್ಗೆ ಪ್ರಯಾಣಿಕರಿಂದ ದೂರು ಬಂದರೆ ಆ ಬಸ್ಸಿನ ನಿರ್ವಾಹಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ರವಾನಿಸಿದೆ.

RELATED ARTICLES

Related Articles

TRENDING ARTICLES