Wednesday, January 1, 2025

ಬಾಂಗ್ಲಾದೇಶ್​ ಸಾರ್ವತ್ರಿಕ ಚುನಾವಣೆ ಇಂದು: ಮಾಜಿ ಪ್ರಧಾನಿಯಿಂದ ಚುನಾವಣಾ ಬಹಿಷ್ಕಾರ!

ಢಾಕಾ: ಇಂದು ಬಾಂಗ್ಲಾದೇಶದ 12ನೇ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಪ್ರಮುಖ ಪ್ರತಿಪಕ್ಷ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮತದಾನ ಬಹಿಷ್ಕಾರದ ನಡುವೆಯೇ ಭಾನುವಾರ ಚುನಾವಣೆ ನಡೆದಿದೆ .

ಜ.7 ರಂದು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು ಜನವರಿ 8ರ ಮುಂಜಾನೆ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ದೇಶದ ಸುಮಾರು 11.96 ಕೋಟಿ ನೋಂದಾಯಿತು ಮತದಾರರು ಮತ ಚಲಾಯಿಸಲಾಯಿಸುವ ಮೂಲಕ 299 ಸಂಸದರನ್ನು ಆಯ್ಕೆ ಮಾಡಲಿದ್ದಾರೆ. ಚುನಾವಣೆಗಾಗಿ ಈಗಾಗಲೇ 42 ಸಾವಿರಕ್ಕೂ ಅಧಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ದೇಶದ ಚುನಾವಣಾ ಆಯೋಗ ವರದಿ ಮಾಡಿದೆ.

ಇದನ್ನೂ ಓದಿ:

ಸರ್ಕಾರದ ಕಾನೂನುಬಾಹಿರ ನೀತಿಗಳ ವಿರುದ್ಧ ಶನಿವಾರ 48 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಆರಂಭಿಸಿದ ಪ್ರತಿಪಕ್ಷ (ಬಿಎನ್‌ಪಿ) ಬಾಂಗ್ಲಾದೇಶ್​ ನ್ಯಾಷನಲ್​ ಪಾರ್ಟಿ ಚುನಾವಣೆಯನ್ನು ಬಹಿಷ್ಕರಿಸಿದೆ. ಇದರಿಂದ ಪ್ರಧಾನಿ ಹಸೀನಾ ಸತತ ನಾಲ್ಕನೇ ಬಾರಿ ಗೆಲ್ಲುವ ನಿರೀಕ್ಷೆಯಿದೆ ಎಂದು ಖಾಸಗಿ ಸುದ್ದಿ ವಾಹಿನಿ ಅಲ್ ಜಜೀರಾ ವರದಿ ಮಾಡಿದೆ.

ಸಾರ್ವತ್ರಿಕ ಚುನಾವಣೆಗೂ ಮೊದಲು ದೇಶದ 10 ಜಿಲ್ಲೆಗಳಲ್ಲಿ ಕನಿಷ್ಠ 14 ಮತದಾನ ಕೇಂದ್ರಗಳು ಮತ್ತು ಎರಡು ಶಾಲೆಗಳಿಗೆ ಶುಕ್ರವಾರ ಹಾಗೂ ಶನಿವಾರ ಬೆಂಕಿ ಹಚ್ಚಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

RELATED ARTICLES

Related Articles

TRENDING ARTICLES