Saturday, January 18, 2025

ದೊಡ್ಡಬಳ್ಳಾಪುರ ಎಪಿಎಂಸಿ ಅವರಣದಲ್ಲಿ ಸರಣಿ ಕಳ್ಳತನ!

ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಅವರಣದಲ್ಲಿನ ಅಂಗಡಿಗಳಲ್ಲಿ ಕಳೆದ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಎಪಿಎಂಸಿಯ ಮುಖ್ಯದ್ವಾರದ ಎಡಬದಿಯಲ್ಲಿರುವ ತೆಂಗಿನ ಅಂಗಡಿಗಳು ಸೇರಿದಂತೆ ಹಲವು ಅಂಗಡಿಗಳಲ್ಲಿ ಕಳವು ನಡೆದಿದೆ, ಅಂಗಡಿ ಶಟರ್ ಮುರಿದು ಒಳ ನುಗ್ಗಿರುವ ಕಳ್ಳರು ಗಲ್ಲಪೆಟ್ಟಿಗೆಯಲ್ಲಿದ್ದ ಹಣದೊಂದಿಗೆ ಪರಾರಿಯಾಗಿದ್ದಾರೆ.

ನಗರದ ಎಪಿಎಂಸಿ ಆವರಣದಲ್ಲಿರುವ ಕಿರಣ್ ತೆಂಗಿನ ಕಾಯಿ ಅಂಗಡಿ, ಹಣ್ಣಿನ ಅಂಗಡಿ, ರೇಷನ್ ಅಂಗಡಿ, ಗ್ರಂಥಿಗೆ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ, ಎಂ.ಕೆ ಸ್ಡೊರ್ ನಲ್ಲಿ 80 ಸಾವಿರ ಮೌಲ್ಯದ ಸಿಗರೇಟ್ ಗಳನ್ನ ಕದ್ದೊಯ್ದಿದ್ದಾರೆ. ಎಪಿಎಂಸಿ ಅವರಣದಲ್ಲಿ ಪೊಲೀಸರ ಗಸ್ತು ಇಲ್ಲದೆ ಇರೋದು ಕಳ್ಳತನ ಪ್ರಕರಣ ನಡೆಯಲು ಕಾರಣವಾಗಿದೆ ಎಂದು ಅಂಗಡಿ ಮಾಲೀಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಜಪಾನ್​ ನಲ್ಲಿ ಭೂಕಂಪನ: ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದ ಪ್ರಧಾನಿ ಮೋದಿ

ನಾವು ಪ್ರತಿಯೊಂದು ತೆರಿಗೆ, ಸೆಸ್ ಬಾಡಿಗೆ ಕಟ್ಟುತ್ತೇವೆ ಆದರೆ ಏನೂ ಪ್ರಯೋಜವಿಲ್ಲ. ಪೊಲೀಸ್ ಇಲಾಖೆಗೂ ಸಿಬ್ಬಂದಿ ನಿಯೋಜಮೆ ಮಾಡಿಲ್ಲ, ಮೂರು ದಿನಗಳ ಹಿಂದೆಯೂ ಕಳ್ಳತನ ನಡೆದಿತ್ತು, ಎಪಿಎಂಸಿ ಅವರಣದಲ್ಲಿ ಪೊಲೀಸರ ಗಸ್ತು ಇಲ್ಲದೆ ಇರೋದು ಕಳ್ಳತನ ಪ್ರಕರಣ ನಡೆಯಲು ಕಾರಣವಾಗಿದೆ ಎಂದು ಅಂಗಡಿ ಮಾಲೀಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES